ಪ್ರೊ ಕಬಡ್ಡಿ ಲೀಗ್: ಬಂಗಾಳ ವಾರಿಯರ್ಸ್, ಯುಪಿ ಯೋಧಾಸ್ ಪಂದ್ಯ ಡ್ರಾ

ಬಂಗಾಳ ವಾರಿಯರ್ಸ್ , ಯುಪಿ ಯೋಧಾಸ್ | Photo: Pro Kabaddi League
ಪುಣೆ: ಬಂಗಾಳ ವಾರಿಯರ್ಸ್ ಹಾಗೂ ಯುಪಿ ಯೋಧಾಸ್ ನಡುವಿನ ಪ್ರೊ ಕಬಡ್ಡಿ ಲೀಗ್ ಪಂದ್ಯ 37-37 ಅಂಕದಿಂದ ಡ್ರಾನಲ್ಲಿ ಕೊನೆಗೊಂಡಿದೆ.
ಸೋಮವಾರ ನಡೆದ ಮತ್ತೊಂದು ಪಂದ್ಯದಲ್ಲಿ ಆತಿಥೇಯ ಪುಣೇರಿ ಪಲ್ಟನ್ ತಂಡ ದಬಾಂಗ್ ಡೆಲ್ಲಿ ತಂಡವನ್ನು 30-23 ಅಂಕಗಳ ಅಂತರದಿಂದ ಮಣಿಸಿತು.
ಪುಣೇರಿ ಪರ ಅಸ್ಲಾಂ ಇನಾಂದರ್(8) ಹಾಗೂ ಮೋಹಿತ್ ಗೊಯತ್(7)ಒಟ್ಟು 15 ಅಂಕ ಗಳಿಸಿದರು.
ಬಂಗಾಳದ ಪರ ನಿತಿನ್ ಕುಮಾರ್ 10 ಅಂಕ ಗಳಿಸಿದರೆ, ಯೋಧಾಸ್ ಪರ ಸುರೇಂದರ್ ಗಿಲ್ 18 ಅಂಕ ಗಳಿಸಿದರು.
Next Story





