ಕ್ವಾಲಿಫೈಯರ್-1 ಸ್ಥಾನಕ್ಕೇರಿದ ಪಂಜಾಬ್ ಕಿಂಗ್ಸ್: ಅನಂದ ಸಾಗರದಲ್ಲಿ ತೇಲಿದ ಪ್ರೀತಿ ಝಿಂಟಾ

PC: x.com/timesofindia
ಹೊಸದಿಲ್ಲಿ: ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆದ ಮುಂಬೈ ವಿರುದ್ಧದ ಪಂದ್ಯದಲ್ಲಿ ನಾಯಕ ಶ್ರೇಯಸ್ ಅಯ್ಯರ್ ಮಾಚ್ ವಿನ್ನಿಂಗ್ ಸಿಕ್ಸರ್ ಸಿಡಿಸುತ್ತಿದ್ದಂತೆ ತಂಡದ ಮಾಲಕಿ ಮತ್ತು ಬಾಲಿವುಡ್ ನಟಿ ಪ್ರೀತಿ ಝಿಂಟಾ ತಮ್ಮ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದಷ್ಟು ಮಟ್ಟಿಗೆ ಸಂಭ್ರಮಿಸಿದ್ದು ಕಂಡುಬಂತು.
ಟ್ರಂಟ್ ಬೋಲ್ಟ್ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ಪ್ರಸಕ್ತ ಋತುವಿನ ಐಪಿಎಲ್ ನಲ್ಲಿ ಅಗ್ರ-2 ಸ್ಥಾನವನ್ನು ಅಯ್ಯರ್ ಖಾತರಿಪಡಿಸಿದರು. ಚೆಂಡು ಬೌಂಡರಿ ಗೆರೆ ದಾಟುತ್ತಿದ್ದಂತೆ ಪ್ರೀತಿ ಝಿಂಟಾ ಆಸನದಿಂದ ಎದ್ದು ಕುಣಿದು ಕುಪ್ಪಳಿಸಿದರು. "ಯಸ್ ಯಸ್!" ಎಂಬ ಜಿಂಟಾ ಉದ್ಗಾರದ ಪೋಸ್ಟ್ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದೀಗ 19 ಅಂಕಗಳೊಂದಿಗೆ ಪಂಜಾಬ್ ಕಿಂಗ್ಸ್ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನಲ್ಲಿದೆ. ಇದರೊಂದಿಗೆ ಜೂನ್ 3ರಂದು ನಡೆಯುವ ಫೈನಲ್ ತಲುಪಲು ಪಿಕೆಬಿಎಸ್ ಗೆ ಎರಡು ಅವಕಾಶಗಳು ಲಭಿಸಿದಂತಾಗಿದೆ. ತಂಡದ ಫ್ರಾಂಚೈಸಿ ಪ್ರೀತಿ ಝಿಂಟಾ ತಮ್ಮ ಭಾವನೆಗಳನ್ನು ಆನ್ ಲೈನ್ ನಲ್ಲಿ "ನಮಗೆ ತೀರಾ ಸಂತಸವಾಗಿದೆ..!!" ಎಂದು ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಜೋಸ್ ಇಂಗ್ಲಿಸ್ 42 ಬಾಲ್ ಗೆ 73 ರನ್ ಸಿಡಿಸಿದರೆ ಯುವ ಎಡಗೈ ಬ್ಯಾಟ್ಸ್ಮನ್ 62 ರನ್ ಕೊಡುಗೆ ನೀಡಿದರು. 109 ರನ್ಗಳ ಭರ್ಜರಿ ಜತೆಯಾಟ ಪಿಕೆಬಿಎಸ್ ಗೆಲುವಿಗೆ ಕಾರಣವಾಯಿತು. 185 ರನ್ ಗಳ ಗುರಿ ಬೆನ್ನಟ್ಟಿದ ಪ್ರೀತಿ ಝಿಂಟಾ ತಂಡ ಇನ್ನೂ 9 ಎಸೆತಗಳಿರುವಂತೆಯೆ ಗೆಲುವಿನ ದಡ ತಲುಪಿತು. ಇಂಗ್ಲಿಸ್- ಆರ್ಯಾ ಜೋಡಿ 109 ರನ್ ಗಳ ಭದ್ರ ಬುನಾದಿ ಹಾಕಿಕೊಟ್ಟ ಬಳಿಕ 16 ರನ್ ಗಳಲ್ಲಿ ಅಜೇಯ 26 ರನ್ ಸಿಡಿಸಿದ ಅಯ್ಯರ್ ಗೆಲುವನ್ನು ಖಾತರಿಪಡಿಸಿದರು.
ಮುಂಬೈ ಇಂಡಿಯನ್ಸ್ ತಂಡ ನಾಲ್ಕನೇ ಸ್ಥಾನಿಯಾಗಿ ಮೇ 30ರಂದು ಎಲಿಮಿನೇಟರ್ ಪಂದ್ಯ ಆಡಬೇಕಾಗಿದೆ.







