ಹೈಲೋ ಓಪನ್ ಕಿರೀಟ ಗೆದ್ದ ಪಿ.ವಿ. ಸಿಂಧು

ಪಿ.ವಿ. ಸಿಂಧು | Photo Credit : PTI
ಹೊಸದಿಲ್ಲಿ, ನ. 1: ಜರ್ಮನಿಯಲ್ಲಿ ರವಿವಾರ ನಡೆದ ಹೈಲೋ ಓಪನ್ ಸೂಪರ್-500 ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ನಲ್ಲಿ ವಿಶ್ವದ ನಂ. 25ನೇ ಆಟಗಾರ್ತಿ ಲೈನ್ ಹೊಜ್ ಮಾರ್ಕ್ ಅವರನ್ನು ನೇರ ಗೇಮ್ ಗಳ ಅಂತರದಿಂದ ಮಣಿಸಿರುವ ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು ಪ್ರಶಸ್ತಿ ಮುಡಿಗೇರಿಸಿಕೊಂಡರು.
39 ನಿಮಿಷಗಳ ಕಾಲ ನಡೆದ ಮಹಿಳೆಯರ ಸಿಂಗಲ್ಸ್ ನ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಂಧು ಅವರು ಡೆನ್ಮಾರ್ಕ್ ಆಟಗಾರ್ತಿಯನ್ನು 21-12, 21-14 ಅಂತರದಿಂದ ಮಣಿಸಿದರು. ಈ ವರ್ಷ ಎರಡನೇ ಪ್ರಶಸ್ತಿಯನ್ನು ಎತ್ತಿಹಿಡಿದರು. ಮಾಜಿ ಚಾಂಪಿಯನ್ ಸಿಂಧು ಜುಲೈನಲ್ಲಿ ಜಪಾನ್ ಓಪನ್ ನಲ್ಲಿ ಪ್ರಶಸ್ತಿ ಜಯಿಸಿದ್ದರು. ಕಳೆದ ವಾರ ಫ್ರೆಂಚ್ ಓಪನ್ ನಲ್ಲಿ ರನ್ನರ್ ಅಪ್ ಆಗಿದ್ದರು.
ಎರಡನೇ ಶ್ರೇಯಾಂಕದ ಸಿಂಧು 9,200 ಅಂಕ ಗಳಿಸಿ ವರ್ಲ್ಡ್ ಟೂರ್ ಫೈನಲ್ಸ್ ನಲ್ಲಿ ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ಉಳಿದಿದ್ದಾರೆ.
Next Story




