ಏಕದಿನ ಕ್ರಿಕೆಟ್ ನಿವೃತ್ತಿ ನಿರ್ಧಾರ ಹಿಂಪಡೆದ ಕ್ವಿಂಟನ್ ಡಿ ಕಾಕ್!

ಕ್ವಿಂಟನ್ ಡಿ ಕಾಕ್ | PC : @mufaddal_vohra
ಕೇಪ್ಟೌನ್, ಸೆ.22: ದಕ್ಷಿಣ ಆಫ್ರಿಕಾ ತಂಡದ ವಿಕೆಟ್ಕೀಪರ್-ಬ್ಯಾಟರ್ ಕ್ವಿಂಟನ್ ಡಿ ಕಾಕ್ ಏಕದಿನ ಅಂತರ್ರಾಷ್ಟ್ರೀಯ ಕ್ರಿಕೆಟ್ ನಿಂದ ದಿಢೀರನೇ ನಿವೃತ್ತಿಯಾಗಿ ಎಲ್ಲರಿಗೂ ಆಘಾತ ನೀಡಿದ್ದರು. ಇದೀಗ ಅವರು ತನ್ನ ನಿವೃತ್ತಿಯ ನಿರ್ಧಾರವನ್ನು ಹಿಂಪಡೆದಿದ್ದು, ಅಕ್ಟೋಬರ್ನಲ್ಲಿ ಪಾಕಿಸ್ತಾನ ಕ್ರಿಕೆಟ್ ಪ್ರವಾಸದ ವೇಳೆ ಏಕದಿನ ಹಾಗೂ ಟಿ-20 ತಂಡದಲ್ಲಿ ಮರು ಪ್ರವೇಶ ಪಡೆದಿದ್ದಾರೆ.
32ರ ಹರೆಯದ ಡಿ ಕಾಕ್ 2021ರಲ್ಲಿ ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದರು ಹಾಗೂ 2023ರ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಕ್ರಿಕೆಟ್ ಪಂದ್ಯದಿಂದಲೂ ತನ್ನ ನಿವೃತ್ತಿ ಪ್ರಕಟಿಸಿದ್ದರು. ಆದರೆ ಅವರು ಅಂತರ್ರಾಷ್ಟ್ರೀಯ ಕ್ರಿಕೆಟ್ನಿಂದ ಸಂಪೂರ್ಣ ನಿವೃತ್ತಿ ಪ್ರಕಟಿಸಿರಲಿಲ್ಲ.
2024ರ ಜೂನ್ನಲ್ಲಿ ಬಾರ್ಬಡೋಸ್ನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಟೂರ್ನಿಯ ವೇಳೆ ದಕ್ಷಿಣ ಆಫ್ರಿಕಾದ ಬಣ್ಣದ ಜೆರ್ಸಿಯನ್ನು ಕೊನೆಯ ಬಾರಿ ಧರಿಸಿ ಆಡಿದ್ದರು.
ದಕ್ಷಿಣ ಆಫ್ರಿಕಾವು ಪಾಕಿಸ್ತಾನ ಕ್ರಿಕೆಟ್ ಪ್ರವಾಸದ ವೇಳೆ ಎರಡು ಟೆಸ್ಟ್, 3 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಒಳಗೊಂಡಿರುವ ಸರಣಿಯನ್ನು ಆಡಲಿದೆ.
*ಸಂಪೂರ್ಣ ತಂಡಗಳು
ಟಿ-20 ತಂಡ: ಡೇವಿಡ್ ಮಿಲ್ಲರ್(ನಾಯಕ), ಕಾರ್ಬಿನ್ ಬಾಶ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ಡೊನೊವನ್ ಫೆರೇರ, ರೀಝಾ ಹೆಂಡ್ರಿಕ್ಸ್, ಜಾರ್ಜ್ ಲಿಂಡೆ, ಕ್ವೆನಾ ಎಂಫಾಕ, ಲುಂಗಿ ಗಿಡಿ, ಪೀಟರ್, ಲುಯಾನ್-ಡ್ರೆ-ಪ್ರಿಟೋರಿಯಸ್, ಆಂಡಿಲ್ ಸಿಮ್ಲೇನ್,ಲಿಝಾಡ್ ವಿಲಿಯಮ್ಸ್.
ಏಕದಿನ ತಂಡ: ಮ್ಯಾಥ್ಯೂ ಬ್ರೀಝ್ಕೆ(ನಾಯಕ), ಕಾರ್ಬಿನ್ ಬಾಶ್, ಡೆವಾಲ್ಡ್ ಬ್ರೆವಿಸ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಝಿ, ಕ್ವಿಂಟನ್ ಡಿ ಕಾಕ್, ಟೋನಿ ಡಿ ರೆರ್ಝಿ, ಡೊನೊವನ್ ಫೆರೇರ, ಜೋರ್ನ್ ಫೋರ್ಟುನ್, ಜಾರ್ಜ್ ಲಿಂಡೆ, ಕ್ವೆನಾ ಮಫಾಕ, ಲುಂಗಿ ಗಿಡಿ, ಪೀಟರ್, ಲುಯಾನ್ ಡ್ರೆ ಪ್ರಿಟೋರಿಯಸ್, ಸಿನೆಥೆಂಬಾ ಕ್ವೆಶಿಲ್.







