ಏಕದಿನ ರ್ಯಾಂಕಿಂಗ್ | ರಶೀದ್ ಖಾನ್ ಮತ್ತೊಮ್ಮೆ ನಂ.1 ಬೌಲರ್

ರಶೀದ್ ಖಾನ್ | Photo Credit : @CricCrazyJohns
ದುಬೈ ಅಫ್ಘಾನಿಸ್ತಾನದ ಲೆಗ್-ಸ್ಪಿನ್ನರ್ ರಶೀದ್ ಖಾನ್ ಅಬುಧಾಬಿಯಲ್ಲಿ ಬಾಂಗ್ಲಾದೇಶ ವಿರುದ್ಧ 3-0 ಅಂತರದಿಂದ ಸರಣಿ ಗೆಲ್ಲಲು ನಿರ್ಣಾಯಕ ಪಾತ್ರವಹಿಸಿದ ನಂತರ ಏಕದಿನ ಬೌಲಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.
2ನೇ ಪಂದ್ಯದಲ್ಲಿ 5 ವಿಕೆಟ್ ಸಹಿತ ಸರಣಿಯಲ್ಲಿ ಒಟ್ಟು 11 ವಿಕೆಟ್ಗಳನ್ನು ಪಡೆದಿರುವ ರಶೀದ್ 5 ಸ್ಥಾನ ಮೇಲಕ್ಕೇರಿ 710 ರೇಟಿಂಗ್ ಪಾಯಿಂಟ್ಸ್ ಪಡೆದು ಅಗ್ರ ಸ್ಥಾನ ಪಡೆದಿದ್ದಾರೆ. 2ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ ಮಹಾರಾಜ್ಗಿಂತ 30ಕ್ಕೂ ಅಧಿಕ ಅಂಕದಿಂದ ಮುಂದಿದ್ದಾರೆ.
ರಶೀದ್ 2018ರ ಸೆಪ್ಟಂಬರ್ನಲ್ಲಿ ಮೊದಲ ಬಾರಿ ನಂ.1 ಬೌಲರ್ ಆಗಿದ್ದರು. 2024ರ ನವೆಂಬರ್ ನಂತರ ಅಗ್ರ ಸ್ಥಾನಕ್ಕೇರಿದ್ದಾರೆ.
ಸರಣಿಯಲ್ಲಿ 7 ವಿಕೆಟ್ಗಳನ್ನು ಪಡೆದಿರುವ ವೇಗದ ಬೌಲರ್ ಅಝ್ಮತುಲ್ಲಾ ಉಮರ್ಝೈ 19 ಸ್ಥಾನ ಮೇಲಕ್ಕೇರಿ 21ನೇ ಸ್ಥಾನ ತಲುಪಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.
ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಇಬ್ರಾಹೀಂ ಝದ್ರಾನ್ ಅವರು 8 ಸ್ಥಾನ ಭಡ್ತಿ ಪಡೆದು 2ನೇ ಸ್ಥಾನಕ್ಕೇರಿ ಜೀವನಶ್ರೇಷ್ಠ ಸಾಧನೆ ಮಾಡಿದರು. ಬಾಂಗ್ಲಾದೇಶ ವಿರುದ್ಧ ಒಟ್ಟು 213 ರನ್ ಗಳಿಸಿ ಟಾಪ್ ಸ್ಕೋರರ್ ಆಗಿದ್ದ ಝದ್ರಾನ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.







