IPL 2026 ಫೈನಲ್ | ವಾಷಿಂಗ್ಟನ್ ಸುಂದರ್ ಅರ್ಧಶತಕ; RCBಗೆ 156 ರನ್ ಗಳ ಗುರಿ ನೀಡಿದ GT

Photo Credit : @IPL
ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರವಿವಾರ ಇಲ್ಲಿ ನಡೆದ ಐಪಿಎಲ್–2026ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಗೆಲುವಿಗೆ 156 ರನ್ ಗಳ ಗುರಿ ಪಡೆದಿದೆ.
ಟಾಸ್ ಗೆದ್ದ RCB ನಾಯಕ ರಜತ್ ಪಟಿದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆ ನಿರ್ಧಾರ ಆರಂಭದಲ್ಲೇ ಫಲ ನೀಡಿತು. GT ನಾಯಕ ಶುಭ್ಮನ್ ಗಿಲ್ ಹಾಗೂ ಆರಂಭಿಕ ಬ್ಯಾಟರ್ ಸಾಯಿ ಸುದರ್ಶನ್ ಪವರ್ಪ್ಲೇ ಅವಧಿಯಲ್ಲೇ ವಿಕೆಟ್ ಒಪ್ಪಿಸಿದರು.
ಆರಂಭಿಕ ಆಘಾತಗಳಿಂದ ಸಂಕಷ್ಟಕ್ಕೆ ಸಿಲುಕಿದ GTಗೆ ವಾಷಿಂಗ್ಟನ್ ಸುಂದರ್ ಆಸರೆಯಾದರು. ಜೀವದಾನದಿಂದ ಪಾರಾದ ಅವರು ಅರ್ಧಶತಕ ದಾಖಲಿಸಿ ತಂಡದ ಮೊತ್ತ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದರೆ ಇತರೆ ಬ್ಯಾಟರ್ ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದ ಕಾರಣ GT 20 ಓವರ್ ಗಳಲ್ಲಿ 8 ವಿಕೆಟ್ ಗೆ 155 ರನ್ ಗಳಿಗೆ ಸೀಮಿತವಾಯಿತು.
RCB ಪರ ರಸಿಕ್ ಸಲಾಂ ದಾರ್ ಮೂರು ವಿಕೆಟ್ ಕಬಳಿಸಿ ಮಿಂಚಿದರು. ಜೋಶ್ ಹ್ಯಾಝಲ್ ವುಡ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಎರಡು ವಿಕೆಟ್ ಪಡೆದರು. ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದ GT ಬ್ಯಾಟರ್ ಗಳು ರನ್ ಗಳಿಕೆಯಲ್ಲಿ ಮುನ್ನಡೆ ಸಾಧಿಸಲು ಸಾಧ್ಯವಾಗಲಿಲ್ಲ.
ಹಾಲಿ ಚಾಂಪಿಯನ್ ಆಗಿರುವ RCB ಸತತ ಪ್ರಶಸ್ತಿ ಗೆಲ್ಲುವ ಗುರಿಯೊಂದಿಗೆ ಕಣಕ್ಕಿಳಿದಿದ್ದರೆ, GT ತನ್ನ ಎರಡನೇ ಐಪಿಎಲ್ ಪ್ರಶಸ್ತಿಯ ನಿರೀಕ್ಷೆಯಲ್ಲಿದೆ.




