ಅಂತರರಾಷ್ಟ್ರೀಯ ಹಾಕಿಗೆ ಮರಳಲು ಸಿದ್ಧ: ವಂದನಾ ಕಟಾರಿಯ

Vandana Katariya (Photo | AP)
ರಾಂಚಿ, ಜ. 11: ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ನಿವೃತ್ತಿ ಘೋಷಿಸಿದ್ದ ಭಾರತೀಯ ಹಾಕಿ ತಂಡದ ಮಾಜಿ ಆಟಗಾರ್ತಿ ವಂದನಾ ಕಟಾರಿಯ, ಈಗ ರಾಷ್ಟ್ರೀಯ ತಂಡಕ್ಕೆ ಮರಳುವ ಉತ್ಸುಕತೆಯನ್ನು ವ್ಯಕ್ತಪಡಿಸಿದ್ದಾರೆ. ಅವರು ಕಳೆದ ವರ್ಷದ ಏಪ್ರಿಲ್ 1ರಂದು ಹಾಕಿಗೆ ನಿವೃತ್ತಿ ಕೋರಿದ್ದರು.
“ನನ್ನನ್ನು ವಾಪಸ್ ಕರೆದರೆ, ಹೌದು, ನಾನು ಲಭ್ಯವಿದ್ದೇನೆ. ವಾಸ್ತವಿಕವಾಗಿ, ನಾನು ಪಂದ್ಯ ಆಡುವ ದೈಹಿಕ ಕ್ಷಮತೆಯನ್ನು ಹೊಂದಿದ್ದೇನೆ. ನನ್ನ ದೈಹಿಕ ಕ್ಷಮತೆಯನ್ನು ಹಾಕಿ ಇಂಡಿಯಾ ಲೀಗ್ (ಎಚ್ಐಎಲ್)ನಲ್ಲಿ ಸಾಬೀತುಪಡಿಸಿದ್ದೇನೆ. ಓರ್ವ ಆಟಗಾರ್ತಿಯಾಗಿ ಭಾರತೀಯ ತಂಡಕ್ಕೆ ನನ್ನ ಅಗತ್ಯವಿದ್ದರೆ, ನಾನು ತಯಾರಿದ್ದೇನೆ,” ಎಂದು ಅವರು ಹೇಳಿದರು.
ಹಾಕಿ ಇಂಡಿಯಾ ಲೀಗ್ನಲ್ಲಿ ಅವರ ತಂಡ ಶ್ರಾಚಿ ಬೆಂಗಾಲ್ ಟೈಗರ್ಸ್ ರನ್ನರ್ಸ್-ಅಪ್ ಆಗಿ ಹೊರಹೊಮ್ಮಿದ ಬಳಿಕ ‘ಸ್ಪೋರ್ಟ್ಸ್ಟಾರ್’ನೊಂದಿಗೆ ಅವರು ಮಾತನಾಡುತ್ತಿದ್ದರು.
2009ರಲ್ಲಿ ರಾಷ್ಟ್ರೀಯ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ವಂದನಾ ಕಳೆದ ವರ್ಷ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಕೋರಿದ್ದರು. ಅವರು ಭಾರತೀಯ ಮಹಿಳಾ ಹಾಕಿ ಇತಿಹಾಸದಲ್ಲಿ ದೇಶದ ಪರವಾಗಿ ಅತ್ಯಂತ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆಯನ್ನು ಹೊಂದಿದ್ದಾರೆ.
ಹರಿದ್ವಾರದ 33 ವರ್ಷದ ಆಟಗಾರ್ತಿ ಟೋಕಿಯೊ ಒಲಿಂಪಿಕ್ಸ್ನಲ್ಲಿ ಆಡಿದ್ದ ಭಾರತೀಯ ತಂಡದ ಅವಿಭಾಜ್ಯ ಭಾಗವಾಗಿದ್ದರು. ಆ ತಂಡವು ಐತಿಹಾಸಿಕ ನಾಲ್ಕನೇ ಸ್ಥಾನ ಗಳಿಸಿತ್ತು.







