ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯಕ್ಕಾಗಿನ ಐಎಎಫ್ ವೈಮಾನಿಕ ಪ್ರದರ್ಶನದ ರಿಹರ್ಸಲ್ ವೀಡಿಯೋ ವೈರಲ್

Photo: PTI
ಅಹಮದಾಬಾದ್: ರವಿವಾರ(ನ.19)ದಂದು ಅಹಮದಾಬ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ವಿಶ್ವಕಪ್ ಫೈನಲ್ ಪಂದ್ಯ ನಡೆಯುವುದಕ್ಕೂ ಮುನ್ನ ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕಾಗಿ ಭಾರತೀಯ ವಾಯುಪಡೆಯ ಸೂರ್ಯಕಿರಣ್ ವೈಮಾನಿಕ ತಂಡವು ಪೂರ್ವಾಭ್ಯಾಸ ನಡೆಸಿತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಶುಕ್ರವಾರದಂದು ನರೇಂದ್ರ ಕ್ರೀಡಾಂಗಣದಲ್ಲಿ ಅದ್ದೂರಿ ಪೂರ್ವಾಭ್ಯಾಸ ನಡೆಸಿದ ಸೂರ್ಯಕಿರಣ್ ತಂಡವು, ರವಿವಾರದಂದು ನಡೆಯಲಿರುವ ವೈಮಾನಿಕ ಪ್ರದರ್ಶನಕ್ಕೂ ಮುನ್ನ ಶನಿವಾರ ಕೂಡಾ ಪೂರ್ವಾಭ್ಯಾಸ ನಡೆಸಲಿದೆ ಎಂದು ಗುಜರಾತ್ ರಕ್ಷಣಾ ಪಡೆಯ ಸಾರ್ವಜನಿಕ ಸಂಪರ್ಕಾಧಿಕಾರಿಯನ್ನು ಉಲ್ಲೇಖಿಸಿ PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಪೂರ್ವಾಭ್ಯಾಸದ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಸಾರ್ವಜನಿಕ ಸಂಪರ್ಕಾಧಿಕಾರಿಯ ಪ್ರಕಾರ, ಅಹಮದಾಬಾದ್ ನಗರದ ಮೊಟೇರಾ ಪ್ರದೇಶದಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನ.19ರಂದು ಪಂದ್ಯ ಪ್ರಾರಂಭವಾಗುವುದಕ್ಕೂ ಮುನ್ನ, ಹತ್ತು ನಿಮಿಷಗಳ ಕಾಲ ಸೂರ್ಯಕಿರಣ್ ತಂಡವು ತನ್ನ ವೈಮಾನಿಕ ಪ್ರದರ್ಶನದಿಂದ ಪ್ರೇಕ್ಷಕರನ್ನು ರೋಮಾಂಚನಗೊಳಿಸಲಿದೆ ಎಂದು ತಿಳಿಸಿದ್ದಾರೆ.
ರವಿವಾರ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ವಿಶ್ವಕಪ್ ಪೈನಲ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಕುತೂಹಲಕಾರಿ ಸಂಗತಿಯೆಂದರೆ, ಈ ಎರಡೂ ತಂಡಗಳು ಲೀಗ್ ಹಂತದಲ್ಲಿ ಪರಸ್ಪರ ಎದುರಾಗುವ ಮೂಲಕ ತಮ್ಮ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಿದ್ದವು.
— (@Johnsmaink) November 17, 2023
Air show by @Suryakiran_IAF at Narendra Modi Stadium, Ahmedabad pic.twitter.com/6H4hEkIpC1
— Baljeet Singh (@ImTheBaljeet) November 17, 2023







