ಮಹಿಳಾ ಏಕದಿನ ಕ್ರಿಕೆಟ್ : ವೇಗವಾಗಿ 1,000 ರನ್ ಗಳಿಸಿದ ಭಾರತೀಯ ಬ್ಯಾಟರ್ ರಿಚಾ ಘೋಷ್

ರಿಚಾ ಘೋಷ್ |Photo Credit : @ICC
ವಿಶಾಖಪಟ್ಟಣ, ಅ. 9: ಭಾರತೀಯ ಬ್ಯಾಟರ್ ರಿಚಾ ಘೋಷ್ ಗುರುವಾರ ಮಹಿಳಾ ಏಕದಿನ ಕ್ರಿಕೆಟ್ನಲ್ಲಿ 1,000 ರನ್ಗಳನ್ನು ಪೂರೈಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಅವರು ಈ ಸಾಧನೆಗೈದಿದ್ದಾರೆ. ಅವರು ಈ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿದರು.
ರಿಚಾ ಘೋಷ್ ಏಕದಿನ ಪಂದ್ಯಗಳಲ್ಲಿ 1,000 ರನ್ಗಳ ಮೈಲಿಗಲ್ಲು ದಾಟಿದ 12ನೇ ಭಾರತೀಯ ಬ್ಯಾಟರ್ ಆದರೂ, ಈ ಸಾಧನೆಯನ್ನು ಎಸೆತಗಳ ಆಧಾರದಲ್ಲಿ ಅತ್ಯಂತ ವೇಗವಾಗಿ ಮಾಡಿದ ಮೊದಲ ಭಾರತೀಯ ಹಾಗೂ ಒಟ್ಟಾರೆ 3ನೇ ಮಹಿಳೆಯಾಗಿದ್ದಾರೆ. ಅವರು 1010 ಎಸೆತಗಳಲ್ಲಿ 1,000 ರನ್ಗಳನ್ನು ಪೂರೈಸಿದ್ದಾರೆ.
ಆಸ್ಟ್ರೇಲಿಯದ ಆ್ಯಶ್ಲೇ ಗಾರ್ಡನರ್ (917 ಎಸೆತಗಳು) ಮೊದಲ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ನ ನ್ಯಾಟರ್ ಸೈವರ್-ಬ್ರಂಟ್ (943 ಎಸೆತಗಳು) 2ನೇ ಸ್ಥಾನದಲ್ಲಿದ್ದಾರೆ.
ರಿಚಾ ಕೇವಲ 46 ಪಂದ್ಯಗಳಲ್ಲಿ 30ರ ಸರಾಸರಿಯಲ್ಲಿ ಮತ್ತು 101.16ರ ಸ್ಟ್ರೈಕ್ ರೇಟ್ನಲ್ಲಿ 1,000 ರನ್ಗಳನ್ನು ಪೂರೈಸಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಭಾರತವು 47 ರನ್ಗಳನ್ನು ಗಳಿಸುವಷ್ಟರಲ್ಲಿ 6 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ವಿಕೆಟ್ಕೀಪರ್-ಬ್ಯಾಟರ್ ಅರ್ಧ ಶತಕದ ಮೂಲಕ ತಂಡವನ್ನು ತಕ್ಷಣದ ಆಪತ್ತಿನಿಂದ ಪಾರು ಮಾಡಿದರು. ಅವರು ಅಮನ್ಜೋತ್ ಕೌರ್ ಮತ್ತು ಸ್ನೇಹ್ ರಾಣಾ ಜೊತೆಗೆ ಅರ್ಧ ಶತಕಗಳ ಎರಡು ಭಾಗೀದಾರಿಕೆಗಳನ್ನು ನಿಭಾಯಿಸಿದರು. ಅವರು 77 ಎಸೆತಗಳಲ್ಲಿ 94 ರನ್ಗಳನ್ನು ಸಿಡಿಸಿದರು.







