ರಾಹುಲ್ ದ್ರಾವಿಡ್, ಯಶಸ್ವಿ ಜೈಸ್ವಾಲ್ ದಾಖಲೆ ಮುರಿದ ರಿಂಕು ಸಿಂಗ್

ರಿಂಕು ಸಿಂಗ್ | Photo Credit : NDTV
ಹೊಸದಿಲ್ಲಿ, ಅ.18: ಆಂಧ್ರ ತಂಡದ ವಿರುದ್ಧ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ 165 ರನ್ ಗಳಿಸಿದ ರಿಂಕು ಸಿಂಗ್ ಅವರು ಉತ್ತರಪ್ರದೇಶ ತಂಡವನ್ನು ಸಂಕಷ್ಟದಿಂದ ಪಾರು ಮಾಡಿ ಮೊದಲ ಇನಿಂಗ್ಸ್ ನಲ್ಲಿ ಮುನ್ನಡೆ ಪಡೆಯುವಲ್ಲಿ ನೆರವಾದರು.
ಪಂದ್ಯವು ಡ್ರಾನಲ್ಲಿ ಕೊನೆಗೊಂಡಿದ್ದು, ರಿಂಕು ಇನಿಂಗ್ಸ್ ಗಮನ ಸೆಳೆಯಿತು. ತಂಡವು ಸಂಕಷ್ಟದಲ್ಲಿದ್ದಾಗ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಂಕು 7ನೇ ವಿಕೆಟ್ ಗೆ ವಿಪ್ರಜ್ ನಿಗಮ್(42ರನ್)ಅವರೊಂದಿಗೆ 122 ರನ್ ನಿರ್ಣಾಯಕ ಜೊತೆಯಾಟ ನಡೆಸಿದರು.
ಕನಿಷ್ಠ 50 ಇನಿಂಗ್ಸ್ಗಳಲ್ಲಿ ಭಾರತದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಸರಾಸರಿಯಲ್ಲಿ(57.39)ಬ್ಯಾಟಿಂಗ್ ಮಾಡಿದ ರಿಂಕು ಅವರು ರಾಹುಲ್ ದ್ರಾವಿಡ್, ಸಾಬಾ ಕರೀಂ ಹಾಗೂ ಹಾಲಿ ಟೆಸ್ಟ್ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ರ ದಾಖಲೆಯನ್ನು ಮುರಿದರು.
ರಿಂಕು ಇದೀಗ 3,500 ಪ್ರಥಮ ದರ್ಜೆ ರನ್ ಗಳಿಸಿದ್ದು, 8 ಶತಕ ಹಾಗೂ 22 ಅರ್ಧಶತಕಗಳನ್ನು ಗಳಿಸಿದ್ದಾರೆ.
Next Story





