ಭಾರತ 38ನೇ ಟೆಸ್ಟ್ ನಾಯಕನಾದ ರಿಷಭ್ ಪಂತ್

ರಿಷಭ್ ಪಂತ್ | PTI
ಗುವಾಹಟಿ, ನ.22: ಶುಭಮನ್ ಗಿಲ್ ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಿಂದ ಹೊರಗುಳಿದ ಹಿನ್ನೆಲೆಯಲ್ಲಿ ರಿಷಬ್ ಪಂತ್ ಭಾರತದ 38ನೇ ನಾಯಕನಾಗಿ ತಂಡವನ್ನು ಮುನ್ನಡೆಸಿದರು.
ಗಿಲ್ ಎರಡನೇ ಟೆಸ್ಟ್ ಪಂದ್ಯವನ್ನಾಡಲು ಸಂಪೂರ್ಣ ಫಿಟ್ ಇರಲಿಲ್ಲ. ಅವರು ಕುತ್ತಿಗೆ ನೋವಿನ ಬಗ್ಗೆ ಹೆಚ್ಚಿನ ತಪಾಸಣೆಗಾಗಿ ಮುಂಬೈಗೆ ತೆರಳಿದ್ದಾರೆ.
ಇಂಗ್ಲೆಂಡ್ ವಿರುದ್ದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿಯ ವೇಳೆ ಭಾರತದ ಟೆಸ್ಟ್ ನಾಯಕತ್ವವನ್ನು ವಹಿಸಿಕೊಂಡಿರುವ ಗಿಲ್ ಅವರು ಕೋಲ್ಕತಾ ಟೆಸ್ಟ್ ಸಂದರ್ಭ ಕುತ್ತಿಗೆ ನೋವಿಗೆ ಒಳಗಾಗಿದ್ದರು.
ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ವಿರಾಟ್ ಕೊಹ್ಲಿ ಅವರು ಭಾರತದ ಪರ ಅತ್ಯಂತ ಹೆಚ್ಚು ಪಂದ್ಯಗಳಲ್ಲಿ(68)ನಾಯಕತ್ವವಹಿಸಿದ್ದಾರೆ.
ಭಾರತದ ಟೆಸ್ಟ್ ನಾಯಕರ ಪಟ್ಟಿ: 1. ಸಿ.ಕೆ. ನಾಯ್ಡು, 2.ವಿಜಯನಗರದ ರಾಜಕುಮಾರ,3. ಐಎಕೆ ಪಟೌಡಿ, 4. ಲಾಲಾ ಅಮರನಾಥ್, 5. ವಿಜಯ ಹಝಾರೆ, 6. ವಿನೂ ಮಂಕಡ್, 7. ಗುಲಾಂ ಅಹ್ಮದ್, 8. ಪಾಲಿ ಉಮ್ರಿಗರ್, 9. ಹೆಮು ಅಧಿಕಾರಿ, 10.ದತ್ತ ಗಾಯಕ್ವಾಡ್, 11. ಪಂಕಜ್ ರಾಯ್, 12. ರಾಮಚಂದ್, 13. ನಾರಿ ಕಾಂಟ್ರಾಕ್ಟರ್, 14. ಎಂಐಎಕೆ ಪಟೌಡಿ, 15. ಚಂದು ಬೋರ್ಡೆ, 16. ಅಜಿತ್ ವಾಡೆಕರ್, 17. ವೆಂಕಟರಾಘವನ್, 18. ಸುನೀಲ್ ಗವಾಸ್ಕರ್, 19. ಬಿಶನ್ ಸಿಂಗ್ ಬೇಡಿ, 20. ಗುಂಡಪ್ಪ ವಿಶ್ವನಾಥ್, 21. ಕಪಿಲ್ ದೇವ್, 22. ದಿಲಿಪ್ ವೆಂಗ್ಸರ್ಕಾರ್, 23. ರವಿ ಶಾಸ್ತ್ರಿ, 24. ಕೆ. ಶ್ರೀಕಾಂತ್, 25. ಮುಹಮ್ಮದ್ ಅಝರುದ್ದೀನ್, 26. ಸಚಿನ್ ತೆಂಡುಲ್ಕರ್, 27. ಸೌರವ್ ಗಂಗುಲಿ, 28. ರಾಹುಲ್ ದ್ರಾವಿಡ್, 29. ವೀರೇಂದ್ರ ಸೆಹ್ವಾಗ್, 30. ಅನಿಲ್ ಕುಂಬ್ಳೆ, 31. ಎಂ.ಎಸ್. ಧೋನಿ, 32. ವಿರಾಟ್ ಕೊಹ್ಲಿ, 33. ಅಜಿಂಕ್ಯ ರಹಾನೆ, 34. ಕೆ.ಎಲ್.ರಾಹುಲ್, 35. ರೋಹಿತ್ ಶರ್ಮಾ, 36. ಜಸ್ಪ್ರಿತ್ ಬುಮ್ರಾ, 37. ಶುಭಮನ್ ಗಿಲ್, 38. ರಿಷಭ್ ಪಂತ್.







