ದ್ವಿತೀಯ ಟೆಸ್ಟ್ | ರಿಷಭ್ ಪಂತ್ಗೆ ಗಾಯ

Photo Credit : ANI
ಕೊಲಂಬೊ: ಶ್ರೀಲಂಕಾ ತಂಡದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟವಾದ ರವಿವಾರ ಮಣಿಕಟ್ಟಿಗೆ ಚೆಂಡು ಬಡಿದ ಹಿನ್ನೆಲೆಯಲ್ಲಿ ಭಾರತದ ವಿಕೆಟ್ಕೀಪರ್-ಬ್ಯಾಟರ್ ರಿಷಭ್ ಪಂತ್ ಮೈದಾನವನ್ನು ಅನಿವಾರ್ಯವಾಗಿ ತೊರೆಯುವಂತಾಯಿತು.
ಭಾರತ ತಂಡದ ಇನಿಂಗ್ಸ್ನ್ನು 58ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಶ್ರೀಲಂಕಾದ ವೇಗದ ಬೌಲರ್ ಲಹಿರು ಕುಮಾರ ಅವರ ಎಸೆತವೊಂದು ಪಂತ್ ಅವರ ಮಣಿಕಟ್ಟಿಗೆ ಅಪ್ಪಳಿಸಿದೆ.
ತಕ್ಷಣವೇ ಫಿಜಿಯೋ ಮೈದಾನಕ್ಕೆ ಧಾವಿಸಿ ಊತವನ್ನು ತಡೆಯಲು ಪಂತ್ ಅವರ ಮಣಿಕಟ್ಟಿಗೆ ಐಸ್ಪ್ಯಾಕ್ ಇಟ್ಟರು. ಭಾರತದ ಬ್ಯಾಟರ್ ಪಂತ್ ಬ್ಯಾಟಿಂಗ್ ಮುಂದುವರಿಸಲಾಗದೆ ಮೈದಾನವನ್ನು ತೊರೆದರು. ಪಂತ್ ನಿರ್ಗಮಿಸಿದ ನಂತರ ಜಡೇಜ ಅವರು ಬ್ಯಾಟಿಂಗ್ಗೆ ಆಗಮಿಸಿದರು.
ಪಂತ್ ಅವರು ಡಗೌಟ್ನಲ್ಲಿ ಫಿಜಿಯೋರಿಂದ ಮತ್ತಷ್ಟು ಚಿಕಿತ್ಸೆ ಪಡೆಯುತ್ತಿರುವುದು ಕಂಡುಬಂತು. ಅವರ ಮಣಿಕಟ್ಟಿಗೆ ಬ್ಯಾಂಡೇಜ್ ಹಾಕಲಾಗಿದೆ.
Next Story




