ಟೆನಿಸ್ ಹಾಲ್ ಆಫ್ ಫೇಮ್ ಗೆ ಫೆಡರರ್ ಸೇರ್ಪಡೆ

Image Source : AP
ಹೊಸದಿಲ್ಲಿ, ನ. 19: ಟೆನಿಸ್ ಜಗತ್ತಿನ ದಿಗ್ಗಜ ರೋಜರ್ ಫೆಡರರ್ ಅಂತರ್ರಾಷ್ಟ್ರೀಯ ಟೆನಿಸ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡಿದ್ದಾರೆ ಎಂದು ರೋಡ್ ಐಲ್ಯಾಂಡ್ನಲ್ಲಿರುವ ಹಾಲ್ ಬುಧವಾರ ಘೋಷಿಸಿದೆ.
ಇಪ್ಪತ್ತು ಗ್ರ್ಯಾನ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿರುವ ಮೊದಲ ಪುರುಷ ಟೆನಿಸ್ ಆಟಗಾರನಾಗಿರುವ ಫೆಡರರ್, ರಫೆಲ್ ನಡಾಲ್ ಮತ್ತು ನೊವಾಕ್ ಜೊಕೊವಿಕ್ ಅವರನ್ನು ಒಳಗೊಂಡ ಶ್ರೇಷ್ಠ ಟೆನಿಸ್ ಯುಗವೊಂದರ ಭಾಗವಾಗಿದ್ದರು. ಈ ಕಾಲವನ್ನು ‘ಟೆನಿಸ್ ನ ಸ್ವರ್ಣ ಯುಗ’ಎಂಬುದಾಗಿ ಸ್ವತಃ ಫೆಡರರ್ ಕರೆದಿದ್ದಾರೆ.
ಆಟಗಾರರ ವಿಭಾಗದಲ್ಲಿ ಹೆಚ್ಚಿನ ಬೆಂಬಲ ಪಡೆದ ಏಕೈಕ ಅಭ್ಯರ್ಥಿ ಫೆಡರರ್ ಆಗಿದ್ದಾರೆ. ಮತದಾನದ ಫಲಿತಾಂಶವನ್ನು ಹಾಲ್ ಬಹಿರಂಗಪಡಿಸುವುದಿಲ್ಲ.
‘‘ಟೆನಿಸ್ ಇತಿಹಾಸ ಮತ್ತು ನನಗಿಂತ ಮೊದಲು ಬಂದವರು ಹಾಕಿಕೊಟ್ಟ ಮಾದರಿಯನ್ನು ನಾನು ಯಾವತ್ತೂ ಗೌರವಿಸಿದ್ದೇನೆ. ಕ್ರೀಡೆ ಮತ್ತು ನನ್ನ ಸಹ ಆಟಗಾರರು ನನ್ನನ್ನು ಈ ರೀತಿಯಾಗಿ ಗುರುತಿಸಿರುವುದರಿಂದ ನಾನು ಅತ್ಯಂತ ವಿನೀತನಾಗಿದ್ದೇನೆ’’ ಎಂದು ಫೆಡರರ್ ಹೇಳಿದರು.
Next Story





