ಲಿಸ್ಟ್ ಎ ಕ್ರಿಕೆಟ್ನಲ್ಲಿ 14,000 ರನ್ ಪೂರೈಸಿದ ಭಾರತದ ಐದನೇ ಆಟಗಾರ ರೋಹಿತ್ ಶರ್ಮಾ

Photo Credit : PTI
ಲಕ್ನೊ, ಜೂ.17: ಹಿರಿಯ ಬ್ಯಾಟರ್ ರೋಹಿತ್ ಶರ್ಮಾ ಲಿಸ್ಟ್ ಎ ಕ್ರಿಕೆಟ್ನಲ್ಲಿ 14,000 ರನ್ ಪೂರೈಸಿದ ಭಾರತದ ಐದನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಬುಧವಾರ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ರೋಹಿತ್ ಈ ಸಾಧನೆ ಮಾಡಿದರು.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರೋಹಿತ್ ಎಲೈಟ್ ಲಿಸ್ಟ್ನಲ್ಲಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಸೌರವ್ ಗಂಗುಲಿ ಹಾಗೂ ರಾಹುಲ್ ದ್ರಾವಿಡ್ರನ್ನು ಸೇರ್ಪಡೆಯಾದರು.
ರೋಹಿತ್ ತನ್ನ 345ನೇ ಲಿಸ್ಟ್ ಎ ಇನಿಂಗ್ಸ್ನಲ್ಲಿ ಈ ಮೈಲಿಗಲ್ಲು ತಲುಪಿದರು. ರೋಹಿತ್ ತನ್ನ ವೃತ್ತಿಜೀವನದಲ್ಲಿ ಸೀನಿಯರ್ ಭಾರತೀಯ ತಂಡವಲ್ಲದೆ, ಭಾರತ ಎ, ಇಂಡಿಯಾ ಬ್ಲ್ಯೂ, ಇಂಡಿಯಾ ಗ್ರೀನ್, ಇಂಡಿಯಾ ರೆಡ್, ಮುಂಬೈ ಹಾಗೂ ಪಶ್ಚಿಮ ವಲಯವನ್ನು ಪ್ರತಿನಿಧಿಸಿದ್ದರು.
ಒಟ್ಟು 26 ಬ್ಯಾಟರ್ಗಳು ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 14,000ಕ್ಕೂ ಅಧಿಕ ಲಿಸ್ಟ್ ಎ ರನ್ ಗಳಿಸಿದ್ದಾರೆ. ಗ್ರಹಾಂ ಗೂಚ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್(22,211)ಗಳಿಸಿದ ದಾಖಲೆ ಹೊಂದಿದ್ದಾರೆ.
ಭಾರತದ ಪರ ಲಿಸ್ಟ್ ಎ ಕ್ರಿಕೆಟ್ನಲ್ಲಿ ಗರಿಷ್ಠ ರನ್ ಗಳಿಸಿದವರು
1.ಸಚಿನ್ ತೆಂಡುಲ್ಕರ್-21,999
2. ವಿರಾಟ್ ಕೊಹ್ಲಿ-16,447
3.ಸೌರವ್ ಗಂಗುಲಿ-15,622
4.ರಾಹುಲ್ ದ್ರಾವಿಡ್-15,271
5.ರೋಹಿತ್ ಶರ್ಮಾ-14,038






