ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ರಾನ್ ಡ್ರೆಪರ್ ನಿಧನ

ರಾನ್ ಡ್ರೆಪರ್ | PC : sacricketmag.com
ಜೋಹಾನ್ಸ್ಬರ್ಗ್: ಅತ್ಯಂತ ಹಿರಿಯ ಟೆಸ್ಟ್ ಕ್ರಿಕೆಟಿಗ ರಾನ್ ಡ್ರೆಪರ್ ನಿಧನರಾಗಿದ್ದಾರೆ ಎಂದು ಅವರ ಕುಟುಂಬ ಮೂಲಗಳು ಶುಕ್ರವಾರ ದೃಢಪಡಿಸಿದ್ದು, ಅವರಿಗೆ 98 ವರ್ಷ ವಯಸ್ಸಾಗಿತ್ತು.
ಅಗ್ರ ಸರದಿಯ ಬ್ಯಾಟರ್ ಹಾಗೂ ವಿಕೆಟ್ಕೀಪರ್ ಆಗಿದ್ದ ಡ್ರೆಪರ್ ಅವರು ದಕ್ಷಿಣ ಆಫ್ರಿಕಾ ತಂಡದ ಪರ 1950ರಲ್ಲಿ ಆಸ್ಟ್ರೇಲಿಯದ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದರು.
ಆಸ್ಟ್ರೇಲಿಯದ ನೀಲ್ ಹಾರ್ವಿ(96 ವರ್ಷ)ಈಗ ಬದುಕಿರುವ ಅತ್ಯಂತ ಹಿರಿಯ ಟೆಸ್ಟ್ ಆಟಗಾರರಾಗಿದ್ದಾರೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಈ ಹಿಂದೆ ಇಬ್ಬರು ಹಿರಿಯ ಟೆಸ್ಟ್ ಕ್ರಿಕೆಟಿಗರಿದ್ದರು. ನಾರ್ಮನ್ ಗಾರ್ಡನ್ 2016ರಲ್ಲಿ ನಿಧನರಾಗುವ ಮೊದಲು 103 ವರ್ಷ ಬದುಕಿದ್ದರು ಹಾಗೂ 2021ರಲ್ಲಿ ಜಾನ್ ವ್ಯಾಟ್ಕಿನ್ಸ್ ತನ್ನ 98ನೇ ವಯಸ್ಸಿನಲ್ಲಿ ನಿಧನರಾಗಿದ್ದರು.
1926ರ ಡಿ.24ರಂದು ಜನಿಸಿದ್ದ ಡ್ರಾಪರ್, ತನ್ನ 19ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು. 1949-50ರಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ 86 ರನ್ ಗಳಿಸಿದ ನಂತರ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಅವರು ತನ್ನ ಟೆಸ್ಟ್ ವೃತ್ತಿಜೀವನದಲ್ಲಿ ಆಡಿರುವ 3 ಇನಿಂಗ್ಸ್ಗಳಲ್ಲಿ ಕೇವಲ 25 ರನ್ ಗಳಿಸಿದ್ದರು.
ಆಗ 21ನೇ ವಯಸ್ಸಿನವರಾಗಿದ್ದ ಹಾರ್ವಿ ಎರಡೂ ಪಂದ್ಯಗಳಲ್ಲಿ ಶತಕ ಗಳಿಸಿದ್ದರು.





