IPL 2026 | ರಾಜಸ್ಥಾನದ ವಿರುದ್ಧ ಡೆಲ್ಲಿಗೆ 7 ವಿಕೆಟ್ ಗಳ ಜಯ

Photo Credit : X
ಜೈಪುರ: ಇಲ್ಲಿನ ಸವಾಯಿ ಮಾನ್ ಸಿಂಗ್ ಸ್ಟೇಡಿಯಂ ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು 7 ವಿಕೆಟ್ ಗಳಿಂದ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ್ ರಾಯಲ್ಸ್ ತಂಡವು 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿತು. ತಂಡದ ನಾಯಕ ರಿಯಾನ್ ಪರಾಗ್ ಅವರ 90 ರನ್ ಗಳ ಆಕರ್ಷಕ ಆಟ ಹಾಗೂ ಡೊನೊವನ್ ಫರೇರಾ ಅವರ ಅಜೇಯ 47 ರನ್ ಗಳ ಕೊಡುಗೆಯಿಂದ ರಾಜಸ್ಥಾನ್ ರಾಯಲ್ಸ್ ಡೆಲ್ಲಿ ಕ್ಯಾಪಿಟಲ್ಸ್ ಗೆ 226 ರನ್ ಗಳ ಗುರಿ ನೀಡಿತು.
ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 5 ಎಸೆತ ಬಾಕಿಯಿರುವಂತೆ 3 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಆ ಮೂಲಕ 7 ವಿಕೆಟ್ ಗಳಿಂದ ಜಯಗಳಿಸಿತು. ಡೆಲ್ಲಿ ಪರ ಕೆ ಎಲ್ ರಾಹುಲ್ 75, ನಿಸ್ಸಂಕ 62 ರನ್ ಗಳಿಸಿದರು.
Next Story




