ಐಪಿಎಲ್ ನಲ್ಲಿ ಬಿಗ್ ಡೀಲ್: 12 ವರ್ಷ ಚೆನ್ನೈ ಪರ ಆಡಿದ್ದ ಜಡೇಜಾ ರಾಜಸ್ಥಾನ ತೆಕ್ಕೆಗೆ

ರವೀಂದ್ರ ಜಡೇಜಾ / ಸಂಜು ಸ್ಯಾಮ್ಸನ್ (Photo: PTI)
ಹೊಸದಿಲ್ಲಿ: ಐಪಿಎಲ್ 2026 ಋತುವಿಗೆ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ನೀಡಲಾಗಿದ್ದ ಗಡುವಿಗೂ ಮುನ್ನವೇ ಐಪಿಎಲ್ ಫ್ರಾಂಚೈಸಿಗಳು ತಮ್ಮ ವಿನಿಮಯ ಆಟಗಾರರ ಹೆಸರನ್ನು ಪ್ರಕಟಿಸಿವೆ. ಈ ಪೈಕಿ ಭಾರತ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ರಾಜಸ್ಥಾನ ರಾಯಲ್ಸ್ ತಂಡದ ಪಾಲಾಗಿದ್ದರೆ, ಭಾರತ ಟಿ-20 ತಂಡದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ.
ಈ ವಿನಿಮಯ ಆಟಗಾರರ ಪಟ್ಟಿಯನ್ನು ಐಪಿಎಲ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
12 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಆಡುತ್ತಿದ್ದ ರವೀಂದ್ರ ಜಡೇಜಾ, ಇದೀಗ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. ಅವರನ್ನು 14 ಕೋಟಿ ರೂ. ತೆತ್ತು ಖರೀದಿಸಲಾಗಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿದೆ. ಅವರನ್ನು 18 ಕೋಟಿ ರೂ.ಗೆ ಖರೀದಿಸಲಾಗಿದೆ.
ಇಬ್ಬರೂ ಆಟಗಾರರನ್ನು ವಿನಿಮಯ ಮಾಡಿಕೊಳ್ಳಲು ಉಭಯ ತಂಡಗಳು ಒಪ್ಪಂದ ಮಾಡೊಕೊಂಡಿವೆ.





