ಸಿಂಗಾಪುರ ಓಪನ್: ಸಾತ್ವಿಕ್-ಚಿರಾಗ್ ಕ್ವಾರ್ಟರ್ ಫೈನಲ್ಗೆ ಲಗ್ಗೆ
ಪ್ರಣಯ್,ಸಿಂಧು, ಟ್ರೀಸಾ-ಗಾಯತ್ರಿಗೆ ಸೋಲು

ಸಾತ್ವಿಕ್-ಚಿರಾಗ್ | PTI
ಸಿಂಗಾಪುರ : ಭಾರತದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಸೂಪರ್ 750-ಸ್ಪರ್ಧೆ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಗುರುವಾರ ಒಂದು ಗಂಟೆ, 14 ನಿಮಿಷಗಳ ಕಾಲ ನಡೆದ ಪುರುಷರ ಡಬಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಇಂಡೋನೇಶ್ಯದ ಸಾಬರ್ ಕಾರ್ಯಮನ್ ಗುಟಾಮ ಹಾಗೂ ಮುಹಮ್ಮದ್ ರೆಝಾರನ್ನು 19-21, 21-16, 21-18 ಗೇಮ್ಗಳ ಅಂತರದಿಂದ ಮಣಿಸಿದರು.
42 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಎಚ್.ಎಸ್. ಪ್ರಣಯ್ ಫ್ರಾನ್ಸ್ನ ಕ್ರಿಸ್ಟೊ ಪೊಪೊವ್ ವಿರುದ್ಧ 16-21, 14-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಪಿ.ವಿ. ಸಿಂಧು ಮಹಿಳೆಯರ ಸಿಂಗಲ್ಸ್ನ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಚೀನಾದ ಚೆನ್ ಯು ಫೀ ವಿರುದ್ಧ 9-21, 21-18, 16-21 ಗೇಮ್ಗಳ ಅಂತರದಿಂದ ಶರಣಾದರು.
ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಜಿಯಾ ಯಿಫಾನ್ ಹಾಗೂ ಝಾಂಗ್ ಶುಕ್ಸಿಯಾನ್ರನ್ನು 8-21, 10-21 ನೇರ ಗೇಮ್ಗಳ ಅಂತರದಿಂದ ಸೋಲುಂಡಿದ್ದಾರೆ.
ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಭಾರತದ ರೋಹನ್ ಕಪೂರ್ ಹಾಗೂ ರುಥ್ವಿಕಾ ಶಿವಾನಿ ಹಾಂಕಾಂಗ್ನ ಟಾಂಗ್ ಚುನ್ ಮಾನ್ ಹಾಗೂ ಸೆ ಯಿಂಗ್ ಸುಯೆಟ್ ವಿರುದ್ಧ 10-21, 16-21 ಗೇಮ್ಗಳ ಅಂತರದಿಂದ ಸೋತಿದ್ದಾರೆ.







