ಸೌದಿ ಸ್ಮ್ಯಾಶ್-2024 | ಅಹಿಕಾ-ಸುತೀರ್ಥ, ಮಾನುಶ್-ಮಾನವ್ ಗೆ ಸೋಲು
ಜಿದ್ದಾ: ಏಶ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ವಿಜೇತ ಅಹಿಕಾ ಮುಖರ್ಜಿ ಹಾಗೂ ಸುತೀರ್ಥ ಮುಖರ್ಜಿ ಸೌದಿ ಸ್ಮ್ಯಾಶ್-2024ರ ಟೇಬಲ್ ಟೆನಿಸ್ ಟೂರ್ನಮೆಂಟ್ನಲ್ಲಿ ಮಂಗಳವಾರ ನಡೆದ 16ರ ಸುತ್ತಿನ ಪಂದ್ಯದಲ್ಲಿ ಜಪಾನ್ನ ಮಿಯು ನಾಗಸಕಿ ಹಾಗೂ ದಕ್ಷಿಣ ಕೊರಿಯಾದ ಕಿಮ್ ನಯೊಂಗ್ ವಿರುದ್ಧ ಸೋತಿದ್ದಾರೆ.
43 ನಿಮಿಷಗಳ ಕಾಲ ನಡೆದ ಮಹಿಳೆಯರ ಡಬಲ್ಸ್ ಪಂದ್ಯದಲ್ಲಿ ಅಹಿಕಾ ಹಾಗೂ ಸುತೀರ್ಥ ಜೋಡಿಯು ನಾಗಾಸಕಿ-ನಯೊಂಗ್ ವಿರುದ್ಧ 2-3(6-11, 11-9, 10-12, 11-6, 11-8)ಅಂತರದಿಂದ ಸೋತಿದೆ.
ಪುರುಷರ ಡಬಲ್ಸ್ ಸ್ಪರ್ಧೆಯ ಅಂತಿಮ-16ರ ಸುತ್ತಿನಲ್ಲಿ ಮಾನುಶ್ ಶಾ ಹಾಗೂ ಮಾನವ್ ಠಕ್ಕರ್ ಸ್ಲೋವಾಕಿಯದ ಲುಬೊಮಿರ್ ಪಿಸ್ಟೆಜ್ ಹಾಗೂ ಹಾಂಕಾಂಗ್ನ ಚಾನ್ ಬಲ್ಡ್ವಿನ್ ಎದುರು 2-3(18-20, 11-4, 11-6, 9-11, 11-7)ಅಂತರದಿಂದ ಸೋಲನುಭವಿಸಿದರು.
ಮಿಶ್ರ ಡಬಲ್ಸ್ ಸೆಮಿ ಫೈನಲ್ ನಲ್ಲಿ ಹರ್ಮೀತ್ ದೇಸಾಯಿ ಹಾಗೂ ಯಶಸ್ವಿನಿ ಘೋರ್ಪಡೆ ಅಗ್ರ ಶ್ರೇಯಾಂಕದ ಚೀನಾದ ಜೋಡಿ ವಾಂಗ್ ಚುಖಿನ್ ಹಾಗೂ ಸನ್ ಯಿಂಗ್ಶಾ ಸವಾಲನ್ನು ಎದುರಿಸಲಿದ್ದಾರೆ.
Next Story