ದ್ವಿತೀಯ ಟೆಸ್ಟ್ ಪಂದ್ಯ | ದಕ್ಷಿಣ ಆಫ್ರಿಕಾ ತಂಡ 489 ರನ್ಗೆ ಆಲೌಟ್

PC | X@BCCI
ಗುವಾಹಟಿ: ಭಾರತ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್ನಲ್ಲಿ 489 ರನ್ಗಳ ದೊಡ್ಡ ಮೊತ್ತ ಕಲೆ ಹಾಕಿದೆ. ಎರಡನೇ ದಿನದ ಆಟದ ಮೂರನೇ ಸೆಷನ್ನಲ್ಲಿ ಆಫ್ರಿಕಾ ತಂಡ ಆಲೌಟ್ ಆಯಿತು.
ಅಗ್ರ ಕ್ರಮಾಂಕದ ಬ್ಯಾಟರ್ಗಳು ಎಲ್ಲರೂ ಸ್ಥಿರ ಆಟವನ್ನು ತೋರಿ ತಂಡದ ಮೊತ್ತಕ್ಕೆ ಉತ್ತಮ ಕೊಡುಗೆ ನೀಡಿದರು. ಮಧ್ಯಕ್ರಮದಲ್ಲಿ ಸೆನುರನ್ ಮುತ್ತುಸಾಮಿ ಶತಕ (109) ಬಾರಿಸಿದರೆ, ಅದೇ ವೇಳೆ ಮಾರ್ಕೊ ಜಾನ್ಸೆನ್ 93 ರನ್ ಗಳಿಸಿ ತಂಡಕ್ಕೆ ಬಿರುಸಿನ ನೆರವು ನೀಡಿದರು.
ಉಳಿದಂತೆ ಮರ್ಕರಂ (38), ರ್ಯಾನ್ ರಿಕಲ್ಟನ್ (35), ಟ್ರಿಸ್ಟನ್ ಸ್ಟಬ್ಸ್ (49), ಹಾಗೂ ನಾಯಕ ತೆಂಬಾ ಬವುಮಾ (41) ಪ್ರಮುಖ ರನ್ಗಳನ್ನು ಸೇರಿಸಿದರು.
ಭಾರತದ ಪರವಾಗಿ ಕುಲ್ದೀಪ್ ಯಾದವ್ 115 ರನ್ಗಳಿಗೆ 4 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ಗಳನ್ನು ಪಡೆದರು.
Next Story





