ಎಸಿಸಿ ಅಧ್ಯಕ್ಷರಾಗಿ ಶಮ್ಮಿ ಸಿಲ್ವ ಅಧಿಕಾರ ಸ್ವೀಕಾರ

ಶಮ್ಮಿ ಸಿಲ್ವ | PC : X \ @ACCMedia1
ಕೊಲಂಬೊ: ಏಶ್ಯನ್ ಕ್ರಿಕೆಟ್ ಮಂಡಳಿ (ಎಸಿಸಿ)ಯ ನೂತನ ಅಧ್ಯಕ್ಷರಾಗಿ ಮಂಡಳಿಯ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಶಮ್ಮಿ ಸಿಲ್ವ ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಭಾರತದ ಜಯ ಶಾ ಅವರ ಸ್ಥಾನವನ್ನು ತುಂಬಿದ್ದಾರೆ.
ಎಸಿಸಿ ಅಧ್ಯಕ್ಷರಾಗಿ ಮೂರು ಅವಧಿಗಳಲ್ಲಿ ಸೇವೆ ಸಲ್ಲಿಸಿದ ಬಳಿಕ, ಶಾ ಇತ್ತೀಚೆಗೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ, ಅವರು ಎಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.
ಕ್ರಿಕೆಟ್ನ ಮಟ್ಟವನ್ನು ಹೆಚ್ಚಿಸಲು, ಉದಯೋನ್ಮುಖ ಪ್ರತಿಭೆಗಳಿಗೆ ಅವಕಾಶಗಳನ್ನು ನೀಡಲು ಮತ್ತು ಈ ವಲಯವನ್ನು ಬೆಸೆಯುವ ಕ್ರಿಕೆಟ್ ಬಾಂಧವ್ಯವನ್ನು ಬಲಗೊಳಿಸಲು ಎಲ್ಲಾ ಸದಸ್ಯ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದಾಗಿ ಕೊಲಂಬೊದಲ್ಲಿರುವ ಎಸಿಸಿ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸಿಲ್ವ ಹೇಳಿದರು.
Next Story





