ಐಪಿಎಲ್ | ಮುಂಬೈ ಇಂಡಿಯನ್ಸ್ಗೆ ಶಾರ್ದುಲ್ ಠಾಕೂರ್ ಸೇರ್ಪಡೆ?

ಶಾರ್ದುಲ್ ಠಾಕೂರ್ | Photo Credit : PTI
ಮುಂಬೈ, ನ.13: ತನ್ನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿ ಈ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡದ ನಾಯಕತ್ವ ವಹಿಸಿದ್ದ ಶಾರ್ದುಲ್ ಠಾಕೂರ್ ಮುಂಬರುವ ಐಪಿಎಲ್ನಲ್ಲಿ ತಮ್ಮದೇ ರಾಜ್ಯದ ಪರ ಆಡುವ ಸಾಧ್ಯತೆಯಿದೆ. ಅರ್ಜುನ್ ತೆಂಡುಲ್ಕರ್ ಮುಂಬೈ ಬದಲಿಗೆ ಬೇರೊಂದು ತಂಡದ ಪಾಲಾಗುವ ನಿರೀಕ್ಷೆ ಇದೆ.
34ರ ವಯಸ್ಸಿನ ಬೌಲಿಂಗ್ ಆಲ್ರೌಂಡರ್ ಠಾಕೂರ್ ಭಾರತದ ಪರ 13 ಟೆಸ್ಟ್, 47 ಏಕದಿನ ಹಾಗೂ 25 ಟಿ-20 ಪಂದ್ಯಗಳನ್ನು ಆಡಿದ್ದು, 131 ಅಂತರ್ರಾಷ್ಟ್ರೀಯ ವಿಕೆಟ್ಗಳನ್ನು ಪಡೆದಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗಿರುವ ಅವರು ಮುಂಬರುವ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಸಾಧ್ಯತೆಯಿದೆ.
ಲಕ್ನೊ ಸೂಪರ್ ಜಯಂಟ್ಸ್ ತಂಡವು ಠಾಕೂರ್ ಹಾಗೂ ಎಡಗೈ ವೇಗಿ ಅರ್ಜುನ್ ತೆಂಡುಲ್ಕರ್ಗೆ ಸಂಬಂಧಿಸಿ ಮುಂಬೈ ಇಂಡಿಯನ್ಸ್ ಸಂಪರ್ಕದಲ್ಲಿದೆ. ತೆಂಡುಲ್ಕರ್ ವಿಚಾರದಲ್ಲಿ ಮಾತುಕತೆ ಅಂತಿಮವಾಗಿದ್ದು, ಈ ಬಾರಿ ಐಪಿಎಲ್ನಲ್ಲಿ ಬೇರೊಂದು ತಂಡದಲ್ಲಿ ಆಡಬಹುದು.
ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಅರ್ಜುನ್ ತೆಂಡುಲ್ಕರ್ ಈ ತನಕ ಕೇವಲ 5 ಪಂದ್ಯಗಳನ್ನು ಆಡಿದ್ದು, 13 ರನ್ ಗಳಿಸಿದ್ದಾರೆ. 3 ವಿಕೆಟ್ಗಳನ್ನು ಕಬಳಿಸಿದ್ದಾರೆ. ಎರಡೂ ಬಾರಿಯ ಹರಾಜಿನಲ್ಲಿ ಮೂಲ ಬೆಲೆಗೆ ಮುಂಬೈ ಇಂಡಿಯನ್ಸ್ ಖರೀದಿಸಿತ್ತು. ಕಳೆದ ವರ್ಷ ಅರ್ಜುನ್ ಒಂದೂ ಪಂದ್ಯವನ್ನು ಆಡಿರಲಿಲ್ಲ.







