ಶುಭಮನ್ ಗಿಲ್ ತಲೆಗೆ ಅಪ್ಪಳಿಸಿದ ಚೆಂಡು, ಕೆಲ ಕ್ಷಣ ಆತಂಕ!

ಶುಭಮನ್ ಗಿಲ್ | PC : X \ @TheeCricketGuyy
ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ 3ನೇ ದಿನದಾಟವಾದ ಶುಕ್ರವಾರ ಮೊದಲ ಸ್ಲಿಪ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ತಲೆಗೆ ಚೆಂಡು ಅಪ್ಪಳಿಸಿದಾಗ ಭಾರತೀಯ ಪಾಳಯದಲ್ಲಿ ಆತಂಕ ಮನೆ ಮಾಡಿತು.
ರವೀಂದ್ರ ಜಡೇಜ ಓವರ್ ನಲ್ಲಿ ಹ್ಯಾರಿ ಬ್ರೂಕ್ ಅವರ ಜೋರಾಗಿ ಬಾರಿಸಿದ ಚೆಂಡು ಗಿಲ್ ತಲೆಗೆ ಬಡಿದಾಗ ಈ ಘಟನೆ ನಡೆಯಿತು. ಚೆಂಡಿನಿಂದ ಪೆಟ್ಟು ತಿಂದ ಗಿಲ್ ಅವರು ವಿಕೆಟ್ಕೀಪರ್ ರಿಷಭ್ ಪಂತ್ ರತ್ತ ತೆರಳಿದರು. ಫಿಸಿಯೋಗೆ ತನ್ನ ಬಳಿ ಆಗಮಿಸುವಂತೆ ಸನ್ನೆ ಮಾಡಿದರು.
ಫಿಜಿಯೋ ಧಾವಿಸಿ ಬಂದು ಗಿಲ್ ಅವರನ್ನು ಪರೀಕ್ಷಿಸಿದರು. ಕೆಲವು ಚಿಕಿತ್ಸೆ ನೀಡಿದರು. ಬೇಗನೆ ಚೇತರಿಸಿಕೊಂಡ ಗಿಲ್ ಅವರು ಸ್ವಲ್ಪ ಹೊತ್ತಿನಲ್ಲಿ ಫೀಲ್ಡಿಂಗ್ ಮುಂದುವರಿಸಿದರು.
Next Story





