ಭಾರತ ತಂಡದ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗರಿಷ್ಠ ರನ್; ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭಮನ್ ಗಿಲ್

Photo : x/BCCI
ಬರ್ಮಿಂಗ್ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕನಾಗಿ ಆಡಿರುವ ತನ್ನ ಮೊದಲ ಟೆಸ್ಟ್ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿರುವ ಶುಭಮನ್ ಗಿಲ್ ಅವರು ವಿರಾಟ್ ಕೊಹ್ಲಿ ಅವರ ಮಹಾನ್ ದಾಖಲೆಯೊಂದನ್ನು ಮುರಿದಿದ್ದಾರೆ.
ಬಲಗೈ ಬ್ಯಾಟರ್ ಗಿಲ್ ಇಂಗ್ಲೆಂಡ್ ವಿರುದ್ಧ ಎಜ್ಬಾಸ್ಟನ್ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದ 4ನೇ ದಿನದಾಟವಾದ ಶನಿವಾರ ಈ ಮೈಲಿಗಲ್ಲು ತಲುಪಿದರು. ಗಿಲ್ ಅವರು ಕೇವಲ 4 ಇನಿಂಗ್ಸ್ ಗಳಲ್ಲಿ ಒಟ್ಟು 460 ರನ್ ಗಳಿಸಿದ್ದು, ಪೂರ್ಣಕಾಲಿಕ ಟೆಸ್ಟ್ ನಾಯಕನಾಗಿಆಡಿದ ಮೊದಲ ಸರಣಿಯಲ್ಲಿ ಮಹತ್ವದ ಸಾಧನೆ ಮಾಡಿದರು.
ಹೆಡ್ಡಿಂಗ್ಲೆಯಲ್ಲಿ 147 ರನ್ ಗಳಿಸಿ ಸರಣಿಯಲ್ಲಿ ಶುಭಾರಂಭ ಮಾಡಿದ ಗಿಲ್ ಅವರು 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 269 ರನ್ ಗಳಿಸಿದರು. ಇಂಗ್ಲೆಂಡ್ ವಾತಾವರಣದಲ್ಲಿ ತನ್ನ ಶಕ್ತಿ-ಸಾಮರ್ಥ್ಯ ಪ್ರದರ್ಶಿಸಿದರು.
ವಿರಾಟ್ ಕೊಹ್ಲಿ ಅವರು 2014-15ರ ಆಸ್ಟ್ರೇಲಿಯ ಪ್ರವಾಸದ ವೇಳೆ 4 ಇನಿಂಗ್ಸ್ ಗಳಲ್ಲಿ 449 ರನ್ ಗಳಿಸಿದ್ದರು. ಆ ಸರಣಿಯ ಮೂಲಕ ಕೊಹ್ಲಿ ಅವರು ಟೆಸ್ಟ್ ನಾಯಕನಾಗಿ ತನ್ನ ಯಶಸ್ವಿ ಅಭಿಯಾನ ಆರಂಭಿಸಿದ್ದರು.
ವಿದೇಶದ ಸವಾಲಿನ ವಾತಾವರಣದಲ್ಲಿ ಅನನುಭವಿ ತಂಡದ ನಾಯಕತ್ವವಹಿಸಿರುವ ಗಿಲ್ ಅವರು ಬ್ಯಾಟಿಂಗ್ ನಲ್ಲೂ ದೊಡ್ಡ ಕೊಡುಗೆ ನೀಡುತ್ತಿದ್ದಾರೆ.
► ಭಾರತದ ಟೆಸ್ಟ್ ನಾಯಕನಾಗಿ ಚೊಚ್ಚಲ ಸರಣಿಯಲ್ಲಿ ಗರಿಷ್ಠ ರನ್ ಗಳಿಸಿದವರು
459:ಶುಭಮನ್ ಗಿಲ್,ಇಂಗ್ಲೆಂಡ್ ವಿರುದ್ಧ(ವಿದೇಶಿ ಸರಣಿ, 2025,4 ಇನಿಂಗ್ಸ್)
449:ವಿರಾಟ್ ಕೊಹ್ಲಿ, ಆಸ್ಟ್ರೇಲಿಯ ವಿರುದ್ಧ(ವಿದೇಶಿ ಸರಣಿ, 2014-15, 4 ಇನಿಂಗ್ಸ್)
347: ವಿಜಯ್ ಹಝಾರೆ,ಇಂಗ್ಲೆಂಡ್ ವಿರುದ್ಧ (ಸ್ವದೇಶ,1951-52,7 ಇನಿಂಗ್ಸ್)
319: ನಾರಿ ಕಂಟ್ರಾಕ್ಟರ್-ಪಾಕಿಸ್ತಾನದ ವಿರುದ್ಧ(ಸ್ವದೇಶ,1960-61, 6 ಇನಿಂಗ್ಸ್)
305: ದಿಲಿಪ್ ವೆಂಗ್ಸರ್ಕಾರ್-ವೆಸ್ಟ್ಇಂಡೀಸ್ ವಿರುದ್ಧ (ಸ್ವದೇಶ,1987-88, 5 ಇನಿಂಗ್ಸ್)
303: ಮುಹಮ್ಮದ್ ಅಝರುದ್ದೀನ್-ನ್ಯೂಝಿಲ್ಯಾಂಡ್ ವಿರುದ್ಧ(ವಿದೇಶ,1989-90, 4 ಇನಿಂಗ್ಸ್)