ಟೆಸ್ಟ್ ಕ್ರಿಕೆಟ್ನಲ್ಲಿ 200 ಕ್ಯಾಚ್ಗಳನ್ನು ಪಡೆದ ಸ್ಟೀವ್ ಸ್ಮಿತ್

ಸ್ಮಿತ್ | PC : PTI
ಗಾಲೆ: ಫೀಲ್ಡಿಂಗ್ನಲ್ಲಿ ಮಹತ್ವದ ಮೈಲಿಗಲ್ಲು ದಾಖಲಿಸುವ ಮೂಲಕ ಸ್ಟೀವ್ ಸ್ಮಿತ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ಬರೆದಿದ್ದಾರೆ. ಕಳೆದ ವಾರ 35ನೇ ಟೆಸ್ಟ್ ಶತಕವನ್ನು ಸಿಡಿಸಿದ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ 10,000 ಮೈಲಿಗಲ್ಲು ತಲುಪಿದ್ದರು. ಸ್ಮಿತ್ ಇದೀಗ ಟೆಸ್ಟ್ ಕ್ರಿಕೆಟ್ನಲ್ಲಿ 200 ಕ್ಯಾಚ್ಗಳನ್ನು ಪಡೆದು ಮಹತ್ವದ ಸಾಧನೆ ಮಾಡಿದರು.
ಗಾಲೆಯಲ್ಲಿ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಕೆಲವು ನಿರ್ಣಾಯಕ ಕ್ಯಾಚ್ಗಳನ್ನು ಪಡೆದು, ರಿಕಿ ಪಾಂಟಿಂಗ್ ದಾಖಲೆ(196 ಕ್ಯಾಚ್ಗಳು)ಮುರಿದರು. 200 ಕ್ಯಾಚ್ಗಳ ಮೂಲಕ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.
►ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚು ಕ್ಯಾಚ್ಗಳನ್ನು ಪಡೆದ ಆಸ್ಟ್ರೇಲಿಯದ ಟಾಪ್-5 ಆಟಗಾರರು(ವಿಕೆಟ್ಕೀಪರ್ ಹೊರತುಪಡಿಸಿ)
ಸ್ಟೀವ್ ಸ್ಮಿತ್(2010-2025)-200 ಕ್ಯಾಚ್ಗಳು
ರಿಕಿ ಪಾಂಟಿಂಗ್(1995-2012)-196 ಕ್ಯಾಚ್ಗಳು
ಮಾರ್ಕ್ ವಾ(1991-2002)-181 ಕ್ಯಾಚ್ಗಳು
ಮಾರ್ಕ್ ಟೇಲರ್(1989-1999)-157 ಕ್ಯಾಚ್ಗಳು
ಅಲನ್ ಬಾರ್ಡರ್(1978-1994)-156 ಕ್ಯಾಚ್ಗಳು
ಟೆಸ್ಟ್ ಕ್ರಿಕೆಟ್ನಲ್ಲಿ ಗರಿಷ್ಠ ಕ್ಯಾಚ್ ಪಡೆದ ವಿಶ್ವದ ಟಾಪ್-5 ಆಟಗಾರರು
ರಾಹುಲ್ ದ್ರಾವಿಡ್(1996-2012, ಭಾರತ)-210 ಕ್ಯಾಚ್ಗಳು
ಜೋ ರೂಟ್(2012-2024, ಇಂಗ್ಲೆಂಡ್)-207 ಕ್ಯಾಚ್ಗಳು
ಮಹೇಲ ಜಯವರ್ಧನೆ(1997-2014, ಶ್ರೀಲಂಕಾ)-205 ಕ್ಯಾಚ್ಗಳು
ಸ್ಟೀವ್ ಸ್ಮಿತ್(2010-2025,ಆಸ್ಟ್ರೇಲಿಯ)-200 ಕ್ಯಾಚ್ಗಳು
ಜಾಕ್ ಕಾಲಿಸ್(1995-2013,ದ.ಆಫ್ರಿಕಾ)-200 ಕ್ಯಾಚ್ಗಳು







