ಮಹಿಳೆಯರ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್; ಆರು ವರ್ಷಗಳ ನಂತರ ಅಗ್ರಸ್ಥಾನಕ್ಕೇರಿದ ಸ್ಮತಿ ಮಂಧಾನ

ಸ್ಮತಿ ಮಂಧಾನ | pc : bcci
ಚೆನ್ನೈ: ಭಾರತ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮತಿ ಮಂಧಾನ ಮಂಗಳವಾರ ಬಿಡುಗಡೆಯಾದ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ. 2019ರ ನಂತರ ಇದೇ ಮೊದಲ ಬಾರಿ ಈ ಸಾಧನೆ ಮಾಡಿದ್ದಾರೆ.
ಸ್ಮತಿಯ ನಂತರ ಭಾರತದ ಇನ್ನಿಬ್ಬರು ಬ್ಯಾಟರ್ ಗಳಾದ ಜೆಮಿಮಾ ರೊಡ್ರಿಗಸ್ ಹಾಗೂ ನಾಯಕಿ ಹರ್ಮನ್ ಪ್ರೀತ್ ಕೌರ್ ಕ್ರಮವಾಗಿ 14ನೇ ಹಾಗೂ 15ನೇ ಸ್ಥಾನದಲ್ಲಿದ್ದಾರೆ.
— BCCI Women (@BCCIWomen) June 17, 2025
Congratulations to #TeamIndia vice-captain Smriti Mandhana on reclaiming the spot in ICC Women's ODI batting rankings @mandhana_smriti pic.twitter.com/OfiSxX70Dh
28ರ ಹರೆಯದ ಸ್ಮತಿ ಮಂಧಾನ ಒಟ್ಟು 727 ಅಂಕಗಳನ್ನು ಗಳಿಸಿದ್ದು, ಇಂಗ್ಲೆಂಡ್ ನಾಯಕಿ ನಟಾಲಿ ಸಿವೆರ್-ಬ್ರೆಂಟ್(719), ದಕ್ಷಿಣ ಆಫ್ರಿಕಾ ನಾಯಕಿ ವಾಲ್ವಾರ್ಟ್(719 ಅಂಕ)ಕ್ರಮವಾಗಿ 2ನೇ ಹಾಗೂ 3ನೇ ಸ್ಥಾನದಲ್ಲಿದ್ದಾರೆ.
ಸ್ಮತಿ ಮಂಧಾನ ಇತ್ತೀಚೆಗಿನ ದಿನಗಳಲ್ಲಿ ಏಕದಿನ ಬ್ಯಾಟರ್ ಗಳ ರ್ಯಾಂಕಿಂಗ್ನಲ್ಲಿ ಅಗ್ರ-10ರೊಳಗೆ ಸ್ಥಾನ ಪಡೆಯುತ್ತಾ ಬಂದಿದ್ದು, ಎಡಗೈ ಆಟಗಾರ್ತಿ 6 ವರ್ಷಗಳಿಂದ ನಂ.1 ಸ್ಥಾನ ಪಡೆದಿರಲಿಲ್ಲ. ಇದೀಗ ನಂ.1 ಸ್ಥಾನ ದಕ್ಕಿಸಿಕೊಂಡಿದ್ದಾರೆ.
ಸದ್ಯ ಭರ್ಜರಿ ಫಾರ್ಮ್ನಲ್ಲಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ್ತಿ ಕೊಲಂಬೊದಲ್ಲಿ ಇತ್ತೀಚೆಗೆ ನಡೆದಿದ್ದ ತ್ರಿಕೋನ ಸರಣಿಯಲ್ಲಿ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಶತಕ ಗಳಿಸಿದ್ದರು.
ಟಿ-20 ಬ್ಯಾಟರ್ ಗಳ ಪಟ್ಟಿಯಲ್ಲಿ ಸ್ಮತಿ ಇದೀಗ 4ನೇ ರ್ಯಾಂಕಿನಲ್ಲಿದ್ದಾರೆ. 5 ಪಂದ್ಯಗಳ ಟಿ-20 ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯನ್ನಾಡಲು ಇಂಗ್ಲೆಂಡ್ಗೆ ತೆರಳಲಿರುವ ಭಾರತ ತಂಡದಲ್ಲಿ ಸ್ಮತಿ ಸ್ಥಾನ ಪಡೆದಿದ್ದಾರೆ. ಜೂನ್ 28ರಂದು ಮೊದಲ ಪಂದ್ಯ ನಡೆಯಲಿದೆ.







