ಟೈಮ್ ನಿಯತಕಾಲಿಕದ ಅತ್ಯಂತ ಪ್ರಭಾವಿ ಕ್ರೀಡಾಪಟುಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಮೃತಿ ಮಂಧಾನ

ಸ್ಮೃತಿ ಮಂಧಾನ | Photo Credit : PTI
ಹೊಸದಿಲ್ಲಿ, ಜೂ.16: ಭಾರತ ಮಹಿಳಾ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂಧಾನ ಟೈಮ್ ನಿಯತಕಾಲಿಕ ಪ್ರಕಟಿಸಿದ ಕ್ರೀಡಾಲೋಕದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಮತ್ತೊಂದು ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದರು. ಜಾಗತಿಕ ಮಟ್ಟದ ಸ್ಟಾರ್ ಕ್ರೀಡಾಪಟುಗಳ ಪಟ್ಟಿಯಲ್ಲಿರುವ ಭಾರತದ ಏಕೈಕ ಕ್ರೀಡಾಳುವಾಗಿದ್ದಾರೆ.
ವಾರ್ಷಿಕ ಪಟ್ಟಿಯಲ್ಲಿ ಕ್ರೀಡೆಗಳನ್ನು ರೂಪಿಸಿದ ಅತ್ಲೆಟಿಕ್ಸ್, ಕೋಚ್ಗಳು, ಹೂಡಿಕೆದಾರರು ಹಾಗೂ ವಕೀಲರುಗಳನ್ನು ಗುರುತಿಸಲಾಗುತ್ತದೆ. ಬಾಸ್ಕೆಟ್ಬಾಲ್ ಲೆಜೆಂಡ್ ಲೆಬ್ರೊನ್ ಜೇಮ್ಸ್ ಈ ವರ್ಷದ ಆವೃತ್ತಿಯಲಿದ್ದಾರೆ. ಫುಟ್ಬಾಲ್ ಐಕಾನ್ಗಳಾದ ಲಿಯೊನೆಲ್ ಮೆಸ್ಸಿ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ, ಟೆನಿಸ್ ತಾರೆ ಕಾರ್ಲೊಸ್ ಅಲ್ಕರಾಝ್, ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಅವರಿದ್ದಾರೆ.
Next Story




