ಭಾರತದ ಆರಂಭಿಕ ದಾಳಿಗೆ ದಕ್ಷಿಣ ಆಫ್ರಿಕಾದ 5 ವಿಕೆಟ್ ಪತನ

Photo : cricketworldcup.com
ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ಭಾರತದ ಬಿಗಿ ಬೌಲಿಂಗ್ ದಾಳಿಗೆ ದಕ್ಷಿಣ ಆಫ್ರಿಕಾ ತನ್ನ ಆರಂಭಿಕ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಗುರಿ ಬೆನ್ನಟ್ಟುವಲ್ಲಿ ಎಡವಿದ ದಕ್ಷಿಣ ಆಫ್ರಿಕಾ 13.1 ಓವರ್ ಗಳಲ್ಲಿ 40 ರನ್ ಗಳಿಸಿ ತನ್ನ ಆರಂಭಿಕ 5 ವಿಕೆಟ್ ಕಳೆದುಕೊಂಡಿದೆ. ಹರಿಣಗಳಿಗೆ ತನ್ನ ಎರಡನೇ ಓವರ್ ನಲ್ಲಿಯೇ ಆಘಾತ ನೀಡಿದ ಮುಹಮ್ಮದ್ ಸಿರಾಜ್ ಕ್ವಿಂಟನ್ ಡಿಕಾಕ್ ರನ್ನು 5 ರನ್ ಗೆ ಎಲ್ ಬಿ ಡಬ್ಲೂ ಮಾಡಿದರೆ, ಬಳಿಕ ದಾಳಿ ಮುಂದುವರಿಸಿದ ಮುಹಮ್ಮದ್ ಶಮಿ 9 ರನ್ ಗೆ ಮಾರ್ಕ್ರಮ್ ವಿಕೆಟ್ ಕಬಳಿಸಿದರು. ಜಡೇಜಾ ಬೌಲಿಂಗ್ ನಲ್ಲಿ ನಾಯಕ ಬವುಮ 11 ರನ್ ಹಾಗೂ ಕ್ಲಾಸನ್ 1 ರನ್ ಗೆ ಸೀಮಿತರಾದರು. ವಾನ್ ಡೆರ್ ಡುಸ್ಸೆನ್ 13 ರನ್ ಗೆ ಶಮಿ ಎಸೆತದಲ್ಲಿ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
ದಕ್ಷಿಣ ಆಫ್ರಿಕಾ ಗೆಲುವಿಗೆ 36.3 ಓವರ್ ಗಳಲ್ಲಿ 287 ರನ್ ಅಗತ್ಯವಿದೆ





