ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ಸತತ ಗೆಲುವು; ಇಟಲಿ ತಂಡದ ದಾಖಲೆ ಸರಿಗಟ್ಟಿದ Spain

ಡಲ್ಲಾಸ್, ಜು. 15: ಫ್ರಾನ್ಸ್ ವಿರುದ್ಧ ಬುಧವಾರ ನಡೆದ ಫಿಫಾ ವಿಶ್ವಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2-0 ಗೋಲುಗಳಿಂದ ಜಯಶಾಲಿಯಾದ ಸ್ಪೇನ್ ತಂಡವು ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ತನ್ನ ಅಜೇಯ ಗೆಲುವಿನ ಓಟವನ್ನು ಮುಂದುವರಿಸಿದೆ.
ಈ ಗೆಲುವಿನ ಮೂಲಕ ಸ್ಪೇನ್ ತಂಡವು ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ಸತತ ಗೆಲುವಿನ ಓಟವನ್ನು 37 ಪಂದ್ಯಗಳಿಗೆ ವಿಸ್ತರಿಸಿದೆ. ಈ ಮೂಲಕ ಇಟಲಿ ತಂಡದ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಿದೆ.
ಮೈಕಲ್ ಒಯರ್ಝಾಬಲ್ ಹಾಗೂ ಪೆಡ್ರೊ ಪೊರ್ರೊ ಗಳಿಸಿದ ತಲಾ ಒಂದು ಗೋಲಿನ ನೆರವಿನಿಂದ 2010ರ ಚಾಂಪಿಯನ್ ಸ್ಪೇನ್ ತಂಡವು 2018ರ ಚಾಂಪಿಯನ್ ಫ್ರಾನ್ಸ್ ತಂಡವನ್ನು ಮಣಿಸಿದೆ. ಇದರೊಂದಿಗೆ ರವಿವಾರ ರಾತ್ರಿ ನ್ಯೂಜೆರ್ಸಿಯಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕೆ ಅರ್ಹತೆ ಪಡೆದಿದೆ.
►ಅಂತರ್‌ರಾಷ್ಟ್ರೀಯ ಫುಟ್ಬಾಲ್ ನಲ್ಲಿ ಸುದೀರ್ಘ ಅಜೇಯ ಓಟ
ಇಟಲಿ – 37 ಪಂದ್ಯಗಳು (2018-2021)
ಸ್ಪೇನ್ – 37 ಪಂದ್ಯಗಳು (2024ರಿಂದ ಈ ತನಕ)
ಅರ್ಜೆಂಟೀನಾ – 36 ಪಂದ್ಯಗಳು (2019-2022)
ಅಲ್ಜೀರಿಯಾ – 35 ಪಂದ್ಯಗಳು (2018-2021)
ಸ್ಪೇನ್ – 35 ಪಂದ್ಯಗಳು (2007-2009)
ಬ್ರೆಜಿಲ್ – 35 ಪಂದ್ಯಗಳು (1993-1996)
ಮೊರಾಕ್ಕೊ – 34 ಪಂದ್ಯಗಳು (2025-2026)




