ವಿಶ್ವಕಪ್ ಟ್ರೋಫಿಯೊಂದಿಗೆ ಮ್ಯಾಡ್ರಿಡ್ಗೆ ಮರಳಿದ ಸ್ಪೇನ್

Photo Credit : x@SEFutbol
ಮ್ಯಾಡ್ರಿಡ್, ಜು.20: ಫಿಫಾ ವಿಶ್ವಕಪ್ ಟೂರ್ನಿಯನ್ನು ಗೆದ್ದ ಸಂಭ್ರಮದಲ್ಲಿರುವ ಸ್ಪೇನ್ ಫುಟ್ಬಾಲ್ ತಂಡವು ಸೋಮವಾರ ತವರಿಗೆ ಮರಳಿದ್ದು ವಿಶ್ವಕಪ್ ಹೀರೋಗಳಿಗೆ ವೀರೋಚಿತ ಸ್ವಾಗತ ನೀಡಲಾಯಿತು.
ಮ್ಯಾಡ್ರಿಡ್ನ ಬೀದಿಗಳಲ್ಲಿ ಸಂಭ್ರಮಾಚರಣೆಗಳು ನಡೆದವು.
ವಿಶ್ವಕಪ್ ವಿಜೇತ ತಂಡವು ಸ್ಪ್ಯಾನಿಶ್ ರಾಜಧಾನಿಗೆ ಬಂದಿಳಿದಿದೆ ಎಂದು ರಾಯಲ್ ಸ್ಪ್ಯಾನಿಶ್ ಫುಟ್ಬಾಲ್ ಒಕ್ಕೂಟ ಸೋಮವಾರ ದೃಢಪಡಿಸಿದೆ. ಆದರೆ, ಆಟಗಾರರು ಐತಿಹಾಸಿಕ ಸಾಧನೆಯನ್ನು ಅಭಿಮಾನಿಗಳೊಂದಿಗೆ ಆಚರಿಸುವ ಬಗ್ಗೆ ತಮ್ಮ ಬಯಕೆ ವ್ಯಕ್ತಪಡಿಸಿದ್ದಾರೆ.
‘‘ಹೌದು.. ವಿಶ್ವಕಪ್ ಕೊನೆಗೂ ಸ್ಪೇನ್ಗೆ ಬಂದಿದೆ. ಸ್ಪೇನ್ ತಂಡವು ಮ್ಯಾಡ್ರಿಡ್ಗೆ ಬಂದಿಳಿದಿದೆ. ನಿಮ್ಮೊಂದಿಗೆ ಆಚರಿಸಲು ಕಾತರದಿಂದಿದ್ದೇವೆ’’ಎಂದು ಎಕ್ಸ್ನಲ್ಲಿ ಬರೆಯಲಾಗಿದೆ.
ಸ್ಪೇನ್ ‘ರಿವರ್ಸ್ ಆಫ್ ದಿ ವರ್ಲ್ಡ್’ಎಂಬ ಹೆಸರಿನ ಸಾರ್ವಜನಿಕ ವಿಜಯೋತ್ಸವ ಆಚರಿಸುವುದಾಗಿ ಘೋಷಿಸಿದೆ. ವಿಜಯೋತ್ಸವವು ಮ್ಯಾಡ್ರಿಡ್ನ ಸಿಬೆಲೆಸ್ ಕಮ್ಯುನಿಕೇಶನ್ಸ್ ಪ್ಯಾಲೇಸ್ನಲ್ಲಿ ನಡೆಯಲಿದೆ.
Next Story




