ಭಾರತ ವಿರುದ್ಧ ಮೊದಲ ಬಾರಿ ಫಾಲೋ ಆನ್ಗೆ ಸಿಲುಕಿದರೂ ಪಂದ್ಯ ಡ್ರಾ ಗೊಳಿಸಿದ ಶ್ರೀಲಂಕಾ

Photo Credit : PTI
ಕೊಲಂಬೊ: ಶ್ರೀಲಂಕಾ ತಂಡವು ಭಾರತ ತಂಡದ ವಿರುದ್ಧ ಮೊದಲ ಬಾರಿ ಫಾಲೋ ಆನ್ಗೆ ಸಿಲುಕಿದರೂ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಶಕ್ತವಾಗಿದೆ.
ಮೊದಲ ಇನಿಂಗ್ಸ್ನಲ್ಲಿ 213 ರನ್ ಹಿನ್ನಡೆ ಅನುಭವಿಸಿ ಫಾಲೋ ಆನ್ಗೆ ಗುರಿಯಾದ ಲಂಕಾ ತಂಡವು ಕಠಿಣ ಮರು ಹೋರಾಟ ನೀಡಿ ಗುರುವಾರ ಭಾರತ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಡ್ರಾಗೊಳಿಸಿದೆ.
ಶ್ರೀಲಂಕಾ ತಂಡವು ಈ ಹಿಂದೆ 27 ಟೆಸ್ಟ್ ಪಂದ್ಯಗಳಲ್ಲಿ ಫಾಲೋ ಆನ್ಗೆ ಸಿಲುಕಿದ ನಂತರ 24 ಬಾರಿ ಸೋಲುಂಡಿದೆ. ಭಾರತ ವಿರುದ್ಧ ಫಾಲೋ ಆನ್ಗೆ ಸಿಲುಕಿದ ಎಲ್ಲ 8 ಪಂದ್ಯಗಳಲ್ಲೂ ಸೋಲುಂಡಿದೆ. ಕೊನೆಗೊ ಕೊಲಂಬೊದಲ್ಲಿ ಫಾಲೋ ಆನ್ ನಂತರ ಸೋಲುವ ಚಾಳಿಯಿಂದ ಹೊರ ಬಂದಿದೆ.
ಶ್ರೀಲಂಕಾ ತಂಡ ಫಾಲೋ ಆನ್ಗೆ ಸಿಲುಕಿದ ನಂತರ ಕೇವಲ ನಾಲ್ಕನೇ ಬಾರಿ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಸಮರ್ಥವಾಗಿದೆ.
ಫಾಲೋ ಆನ್ ನಂತರ ಶ್ರೀಲಂಕಾದ ಸಾಧನೆ
ಝಿಂಬಾಬ್ವೆ ವಿರುದ್ಧ, ಬುಲಾವಯೊ, 1994-193/4
ಇಂಗ್ಲೆಂಡ್ ವಿರುದ್ಧ, ಲಾರ್ಡ್ಸ್, 2006-537/9
ವೆಸ್ಟ್ಇಂಡೀಸ್ ವಿರುದ್ಧ, ಗಾಲೆ, 2010-241/4
ಭಾರತ ವಿರುದ್ಧ, ಕೊಲಂಬೊ ಎಸ್ಎಸ್ಸಿ, 2026-429/9
ಎರಡೂ ಇನಿಂಗ್ಸ್ಗಳಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟರ್ ದಿನುಶಾ
ಶ್ರೀಲಂಕಾ ತಂಡವು ಸರಣಿಯಲ್ಲಿ ಪ್ರತಿರೋಧ ಒಡ್ಡಲು ಸೊನಾಲ್ ದಿನುಶಾ ಪ್ರಮುಖ ಪಾತ್ರವಹಿಸಿದ್ದಾರೆ. ಗಾಲೆಯಲ್ಲಿ ತನ್ನ ಚೊಚ್ಚಲ ಶತಕ ಗಳಿಸಿದ್ದ ದಿನುಶಾ ಎರಡು ಪಂದ್ಯಗಳ ಸರಣಿಯಲ್ಲಿ ಒಟ್ಟು ಮೂರು ಶತಕಗಳನ್ನು ಗಳಿಸಿದ್ದಾರೆ.
ಫಾಲೋ ಆನ್ ನಂತರ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್ಗಳಲ್ಲಿ ಶತಕ ಗಳಿಸಿದ ಮೂರನೇ ಬ್ಯಾಟರ್ ಎಂಬ ಹಿರಿಮೆಗೆ ದಿನುಶಾ ಪಾತ್ರರಾದರು.






