ಏಶ್ಯ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿ | ಪಾಕಿಸ್ತಾನಕ್ಕೆ ಸೋಲು: ಶ್ರೀಲಂಕಾ ‘ಎ’ ಚಾಂಪಿಯನ್

Photo Credit : Faisal Mohammad/Al Jazeera
ದೋಹಾ, ನ.29: ನಿಶಾನ್ ಮದುಷ್ಕ (87 ರನ್, 95 ಎಸೆತ) ಅವರ ಅರ್ಧಶತಕದ ಕೊಡುಗೆ ಹಾಗೂ ರವಿಂದು ಫೆರ್ನಾಂಡೊ (3-26) ಮತ್ತು ಗರುಕ ಸಂಕೇತ್ (3-46) ಅವರ ಅಮೋಘ ಬೌಲಿಂಗ್ ನೆರವಿನಿಂದ ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನ ತಂಡವನ್ನು 1 ವಿಕೆಟ್ ನಿಂದ ರೋಚಕವಾಗಿ ಮಣಿಸಿ ಏಶ್ಯ ಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟಕ್ಕೇರಿದೆ.
ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಗೆಲ್ಲಲು 217 ರನ್ ಗಳ ಗುರಿ ಪಡೆದಿದ್ದ ಶ್ರೀಲಂಕಾ ‘ಎ’ ತಂಡವು 41.3 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 220 ರನ್ ಗಳಿಸಿತು.
ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ ‘ಎ’ ತಂಡವು ಶಹಝೈಬ್ ಖಾನ್ (60 ರನ್, 91 ಎಸೆತ) ಅವರ ಅರ್ಧಶತಕದ ನೆರವಿನಿಂದ 50 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 216 ರನ್ ಗಳಿಸಲಷ್ಟೇ ಶಕ್ತವಾಯಿತು.
ಫೆರ್ನಾಂಡೊ ಹಾಗೂ ಸಂಕೇತ್ ತಲಾ ಮೂರು ವಿಕೆಟ್ ಪಡೆದರೆ, ವನುಜ ಸಹನ್ (2-33) ಎರಡು ವಿಕೆಟ್ ಪಡೆದರು.
Next Story




