ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಯಶಸ್ವಿ ಫೀಲ್ಡರ್ ಎನಿಸಿಕೊಂಡ ಸ್ಟೀವನ್ ಸ್ಮಿತ್

Photo Credit : AFP
ಡರ್ಬನ್, ಅ. 11: ಆಸ್ಟ್ರೇಲಿಯಾದ ಹಿರಿಯ ಬ್ಯಾಟರ್ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ರವಿವಾರ ಮತ್ತೊಂದು ಮೈಲಿಗಲ್ಲು ತಲುಪಿದರು. ಇಂಗ್ಲೆಂಡ್ ತಂಡದ ಜೋ ರೂಟ್ ಅವರನ್ನು ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಫೀಲ್ಡರ್ ಆಗಿ ಹೊರಹೊಮ್ಮಿದರು.
ಕಿಂಗ್ಸ್ಮೀಡ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಸ್ಮಿತ್ ಈ ಸಾಧನೆ ಮಾಡಿದರು.
ಮೂರನೇ ದಿನದಾಟವಾದ ರವಿವಾರ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ನಲ್ಲಿ ಡೇವಿಡ್ ಬೆಡಿಂಗ್ಹ್ಯಾಮ್ ನೀಡಿದ ಕ್ಯಾಚ್ ಪಡೆಯುವ ಮೂಲಕ ಸ್ಮಿತ್ ಈ ಮೈಲಿಗಲ್ಲು ತಲುಪಿದರು. 49 ರನ್ ಗಳಿಸಿದ್ದ ಬೆಡಿಂಗ್ಹ್ಯಾಮ್ ಮೊದಲ ಸ್ಲಿಪ್ನತ್ತ ಚೆಂಡನ್ನು ಅಟ್ಟಿದರು. ಆಗ ತಮ್ಮ ಎಡಬದಿಗೆ ಜಿಗಿದ ಸ್ಮಿತ್ ಕ್ಯಾಚ್ ಪೂರ್ಣಗೊಳಿಸಿದರು. ದಕ್ಷಿಣ ಆಫ್ರಿಕಾದ ಬ್ಯಾಟರ್ ಕೇವಲ ಒಂದು ರನ್ನಿಂದ ಅರ್ಧಶತಕ ವಂಚಿತರಾದರು.
ಈ ಕ್ಯಾಚ್ನೊಂದಿಗೆ ಸ್ಮಿತ್ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 221 ಕ್ಯಾಚ್ಗಳನ್ನು ಪಡೆದಿದ್ದಾರೆ. ರೂಟ್ ಅವರ ಹಿಂದಿನ ದಾಖಲೆ (220) ಮುರಿದಿದ್ದಾರೆ. ರಾಹುಲ್ ದ್ರಾವಿಡ್ (210 ಕ್ಯಾಚ್) ಸಾರ್ವಕಾಲಿಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ನಲ್ಲಿ ಗರಿಷ್ಠ ಕ್ಯಾಚ್ಗಳನ್ನು ಪಡೆದ ಫೀಲ್ಡರ್ಗಳು
221 — ಸ್ಟೀವನ್ ಸ್ಮಿತ್
220 — ಜೋ ರೂಟ್
210 — ರಾಹುಲ್ ದ್ರಾವಿಡ್
205 — ಎಂ. ಜಯವರ್ಧನೆ
200 — ಜಾಕಸ್ ಕಾಲಿಸ್
196 — ರಿಕಿ ಪಾಂಟಿಂಗ್






