ಸುಲ್ತಾನ್ ಆಫ್ ಜೊಹೋರ್ ಕಪ್ | ಜೂನಿಯರ್ ಪುರುಷರ ಹಾಕಿ ತಂಡ ಪ್ರಕಟ

PC : hockeyindia.org
ಹೊಸದಿಲ್ಲಿ, ಸೆ.22: ಮಲೇಶ್ಯದಲ್ಲಿ ನಡೆಯಲಿರುವ ಮುಂಬರುವ ಸುಲ್ತಾನ್ ಆಫ್ ಜೊಹೋರ್ ಕಪ್ಗೆ ಹಾಕಿ ಇಂಡಿಯಾವು ಸೋಮವಾರ 18 ಸದಸ್ಯರನ್ನು ಒಳಗೊಂಡ ಜೂನಿಯರ್ ಪುರುಷರ ಹಾಕಿ ತಂಡವನ್ನು ಪ್ರಕಟಿಸಿದೆ.
ಅಕ್ಟೋಬರ್ 11ರಿಂದ 18ರ ತನಕ ನಡೆಯಲಿರುವ ಸ್ಪರ್ಧಾವಳಿಗಾಗಿ ಪಿ.ಆರ್. ಶ್ರೀಜೇಶ್ ಮಾರ್ಗದರ್ಶನದ ಜೂನಿಯರ್ ಹಾಕಿ ತಂಡವನ್ನು ಡಿಫೆಂಡರ್ ರೋಹಿತ್ ನಾಯಕನಾಗಿ ಮುನ್ನಡೆಸಲಿದ್ದಾರೆ.
ಈ ಹಿಂದಿನ ಆವೃತ್ತಿಯ ಪಂದ್ಯಾವಳಿಯಲ್ಲಿ ಭಾರತ ತಂಡವು ಕಂಚಿನ ಪದಕವನ್ನು ಜಯಿಸಿತ್ತು. ಅಕ್ಟೋಬರ್ 11ರಂದು ಬ್ರಿಟನ್ ತಂಡವನ್ನು ಎದುರಿಸುವ ಮೂಲಕ ಭಾರತ ತಂಡವು ತನ್ನ ಅಭಿಯಾನವನ್ನು ಆರಂಭಿಸಲಿದೆ.
ಸಂಪೂರ್ಣ ತಂಡ7
► ಗೋಲ್ಕೀಪರ್ಗಳು: ಬಿಕ್ರಮ್ಜೀತ್ ಸಿಂಗ್, ಪ್ರಿನ್ಸ್ದೀಪ್ ಸಿಂಗ್
► ಡಿಫೆಂಡರ್ ಗಳು: ರೋಹಿತ್(ನಾಯಕ), ತಲೀಮ್ಪ್ರಿಯಬಾರ್ತ, ಅನ್ಮೋಲ್ ಎಕ್ಕಾ, ಆಮಿರ್ ಅಲಿ, ಸುನೀಲ್ ಪಿ.ಬಿ., ರವನೀತ್ ಸಿಂಗ್.
► ಮಿಡ್ ಫೀಲ್ಡರ್ ಗಳು: ಅಂಕಿತ್ ಪಾಲ್, ಇಂಗ್ಲೆಂಬಾ ಲುವಾಂಗ್, ಅದ್ರೋಹಿತ್ ಎಕ್ಕಾ, ಅರಾಜಿತ್ ಸಿಂಗ್, ರೋಶನ್ ಕುಜುರ್, ಮನ್ಮೀತ್ ಸಿಂಗ್.
► ಫಾರ್ವರ್ಡ್ಗಳು: ಅರ್ಷದೀಪ್ ಸಿಂಗ್, ಸೌರಭ್ ಆನಂದ್ ಕುಶ್ವಾ, ಅಜೀತ್ ಯಾದವ್, ಗುರ್ಜೋತ್ ಸಿಂಗ್.
► ಮೀಸಲು ಅಟಗಾರರು: ವಿವೇಕ್ ಲಾಕ್ರಾ, ಶಾರದಾನಂದ ತಿವಾರಿ, ಥೋಕ್ಚೋಮ್ ಕಿಂಗ್ಸನ್ ಸಿಂಗ್, ರೋಹಿತ್ ಕುಲ್ಲು, ದಿಲ್ರಾಜ್ ಸಿಂಗ್.







