ಅಂತರರಾಷ್ಟ್ರೀಯ ಫುಟ್ಬಾಲ್ನಿಂದ ಸುನೀಲ್ ಚೆಟ್ರಿ ನಿವೃತ್ತಿ

ಸುನೀಲ್ ಚೆಟ್ರಿ | PC : NDTV
ಹೊಸದಿಲ್ಲಿ, ನ.7: ಭಾರತದ ಫುಟ್ಬಾಲ್ ತಂಡವು 2027ರ ಆವೃತ್ತಿಯ ಎಎಫ್ಸಿ ಏಶ್ಯನ್ ಕಪ್ನ ಕೊನೆಯ ಸುತ್ತಿನ ಅರ್ಹತಾ ಪಂದ್ಯದಿಂದ ನಿರ್ಗಮಿಸಿರುವ ಹಿನ್ನೆಲೆಯಲ್ಲಿ ಸುನೀಲ್ ಚೆಟ್ರಿ ತನ್ನ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
‘ಟೈಮ್ಸ್ ಆಫ್ ಇಂಡಿಯಾ’ದೊಂದಿಗೆ ಶುಕ್ರವಾರ ವೀಡಿಯೊ ಸಂದರ್ಶನದ ವೇಳೆ ಚೆಟ್ರಿ ತನ್ನ ನಿವೃತ್ತಿಯ ನಿರ್ಧಾರ ಪ್ರಕಟಿಸಿದರು.
ಚೆಟ್ರಿ ಈ ಹಿಂದೆ 2024ರ ಜೂನ್ ನಲ್ಲಿ ನಿವೃತ್ತಿ ಪ್ರಕಟಿಸಿದ್ದರು. ಕೋಲ್ಕತಾದ ಸಾಲ್ಟ್ಲೇಕ್ ಕ್ರೀಡಾಂಗಣದಲ್ಲಿ ವಿದಾಯದ ಪಂದ್ಯವನ್ನೂ ಆಡಿದ್ದರು.
2027ರ ಏಶ್ಯನ್ ಕಪ್ ನ ಅರ್ಹತಾ ಸುತ್ತಿನಲ್ಲಿ ಭಾರತ ತಂಡದ ಪಂದ್ಯಗಳಿಗೆ ಲಭ್ಯವಿರುವಂತೆ ಭಾರತದ ಮಾಜಿ ಮುಖ್ಯ ಕೋಚ್ ಮನೊಲೊ ಮಾರ್ಕ್ವೆಝ್ ವಿನಂತಿಸಿದ ಹಿನ್ನೆಲೆಯಲ್ಲಿ ಚೆಟ್ರಿ ತನ್ನ ನಿವೃತ್ತಿಯ ನಿರ್ಧಾರದಿಂದ ಹಿಂದೆ ಸರಿದಿದ್ದರು.
41ರ ಹರೆಯದ ಚೆಟ್ರಿ 157 ಪಂದ್ಯಗಳಲ್ಲಿ ಒಟ್ಟು 95 ಗೋಲುಗಳನ್ನು ಗಳಿಸಿದ್ದು, ಭಾರತದ ಗರಿಷ್ಠ ಗೋಲ್ ಸ್ಕೋರರ್ ಆಗಿದ್ದಾರೆ.
ಚೆಟ್ರಿ ಈಗಲೂ ಕ್ಲಬ್ ಫುಟ್ಬಾಲ್ ನಲ್ಲಿ ಸಕ್ರಿಯರಾಗಿದ್ದು, ಇತ್ತೀಚೆಗೆ ಬೆಂಗಳೂರು ಫುಟ್ಬಾಲ್ ಕ್ಲಬ್ ನೊಂದಿಗೆ ಹೊಸ ಒಪ್ಪಂದಕ್ಕೆ ಸಹಿ ಹಾಕಿದ್ದರು.







