ವಿರಾಟ್ ಕೊಹ್ಲಿ, ರೋಹಿತ್ ದಾಖಲೆ ಮುರಿದ ಸೂರ್ಯಕುಮಾರ್

ಸೂರ್ಯಕುಮಾರ್ , ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ | Photo Credit : PTI
ತಿರುವನಂತಪುರ: ಟಿ-20 ಅಂತರ್ರಾಷ್ಟ್ರೀಯ ಕ್ರಿಕೆಟ್ನಲ್ಲಿ ಎದುರಿಸಿದ ಎಸೆತಗಳ ಆಧಾರದಲ್ಲಿ ವೇಗವಾಗಿ 3,000 ರನ್ ತಲುಪಿದ ಮೊದಲ ಆಟಗಾರ ಎನಿಸಿಕೊಂಡಿರುವ ಭಾರತದ ಟಿ-20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ ಯಾದವ್ ಇತಿಹಾಸ ನಿರ್ಮಿಸಿದರು.
ನ್ಯೂಝಿಲ್ಯಾಂಡ್ ವಿರುದ್ಧ ರವಿವಾರ ನಡೆದ ಐದನೇ ಟಿ-20 ಪಂದ್ಯದ ವೇಳೆ ಯಾದವ್ ಈ ಸಾಧನೆ ಮಾಡಿದರು.
ಕೇವಲ 1,822 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪಿದ ಯಾದವ್ ಅವರು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸಹಿತ ಇತರ ಹಲವು ಅಂತರ್ರಾಷ್ಟ್ರೀಯ ಸ್ಟಾರ್ಗಳ ದಾಖಲೆ ಮುರಿದರು.
ಕೊಹ್ಲಿ 2,169 ಎಸೆತಗಳು ಹಾಗೂ ರೋಹಿತ್ 2,149 ಎಸೆತಗಳಲ್ಲಿ ಮೂರು ಸಾವಿರ ರನ್ ಪೂರೈಸಿದ್ದರು.
ಮುಹಮ್ಮದ್ ವಸೀಂ, ಜೋಸ್ ಬಟ್ಲರ್, ಆ್ಯರೊನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ ಈ ಪಟ್ಟಿಯಲ್ಲಿದ್ದಾರೆ. ಕ್ಷಿಪ್ರಗತಿಯ ಸ್ಕೋರ್ ರೇಟ್ ಹಾಗೂ ತನ್ನ ಆಕ್ರಮಣಕಾರಿ ಶೈಲಿಯ ಬ್ಯಾಟಿಂಗ್ನ ಮೂಲಕ ಯಾದವ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.
►ವೇಗವಾಗಿ 3,000 ಟಿ-20 ರನ್(ಎದುರಿಸಿದ ಎಸೆತಗಳು)
1,822-ಸೂರ್ಯಕುಮಾರ ಯಾದವ್
1,947-ಮುಹಮ್ಮದ್ ವಸೀಂ
2,068-ಜೋಸ್ ಬಟ್ಲರ್
2,077-ಆ್ಯರೊನ್ ಫಿಂಚ್
2,113-ಡೇವಿಡ್ ವಾರ್ನರ್
2,149-ರೋಹಿತ್ ಶರ್ಮಾ
2,169-ವಿರಾಟ್ ಕೊಹ್ಲಿ







