IPL 2026 | ವೇಗದ ಐಪಿಎಲ್ ಶತಕದಿಂದ ವಂಚಿತರಾದ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ನ್ಯೂ ಚಂಡಿಗಡ, ಮೇ 27: ಸನ್ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಬುಧವಾರ ಆಡಿದ ತಮ್ಮ ಚೊಚ್ಚಲ ಐಪಿಎಲ್ ಪ್ಲೇಆಫ್ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಕೇವಲ ಮೂರು ರನ್ಗಳಿಂದ ವೇಗದ ಐಪಿಎಲ್ ಶತಕ ಗಳಿಸುವುದರಿಂದ ವಂಚಿತರಾದರು.
ಸೂರ್ಯವಂಶಿ 29 ಎಸೆತಗಳಲ್ಲಿ 97 ರನ್ ಗಳಿಸಿ ಔಟಾದರು. ಈ ಮೂಲಕ ಕ್ರಿಸ್ ಗೇಲ್ ದಾಖಲೆ ಮುರಿಯುವುದರಿಂದ ಸ್ವಲ್ಪದರಲ್ಲೇ ವಂಚಿತರಾದರು. ಗೇಲ್ 2013ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್ಸಿಬಿ ಪರವಾಗಿ 30 ಎಸೆತಗಳಲ್ಲಿ ಶತಕ ಪೂರೈಸಿದ್ದರು.
ಪ್ರಫುಲ್ ಹಿಂಗೆ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ಸೂರ್ಯವಂಶಿ ಇನಿಂಗ್ಸ್ನಲ್ಲಿ ಐದು ಬೌಂಡರಿ ಹಾಗೂ 12 ಸಿಕ್ಸರ್ಗಳಿದ್ದವು.
ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲಿ ಎರಡನೇ ಹಾಗೂ ಮೂರನೇ ವೇಗದ ಶತಕ ಸಿಡಿಸಿದ ದಾಖಲೆ ಹೊಂದಿದ್ದಾರೆ.
►ಐಪಿಎಲ್ ಇತಿಹಾಸದಲ್ಲಿ ವೇಗದ ಶತಕಗಳು
ಕ್ರಿಸ್ ಗೇಲ್ (ಆರ್ಸಿಬಿ) – ಪುಣೆ ವಾರಿಯರ್ಸ್ ವಿರುದ್ಧ – 30 ಎಸೆತಗಳು – 2013
ವೈಭವ್ ಸೂರ್ಯವಂಶಿ (ರಾಜಸ್ಥಾನ) – ಗುಜರಾತ್ ಟೈಟಾನ್ಸ್ ವಿರುದ್ಧ – 35 ಎಸೆತಗಳು – 2025
ವೈಭವ್ ಸೂರ್ಯವಂಶಿ (ರಾಜಸ್ಥಾನ) – ಸನ್ರೈಸರ್ಸ್ ಹೈದರಾಬಾದ್ ವಿರುದ್ಧ – 36 ಎಸೆತಗಳು – 2026
ಯೂಸುಫ್ ಪಠಾಣ್ (ರಾಜಸ್ಥಾನ) – ಮುಂಬೈ ಇಂಡಿಯನ್ಸ್ ವಿರುದ್ಧ – 37 ಎಸೆತಗಳು – 2010
ಹೆನ್ರಿಕ್ ಕ್ಲಾಸೆನ್ (ಎಸ್ಆರ್ಎಚ್) – ಕೆಕೆಆರ್ ವಿರುದ್ಧ – 37 ಎಸೆತಗಳು – 2015






