100 ಸಿಕ್ಸರ್ ಸಿಡಿಸಿದ ಅತಿ ಕಿರಿಯ ಕ್ರಿಕೆಟಿಗ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : PTI
ಜೈಪುರ, ಮೇ 9: ಗುಜರಾತ್ ಟೈಟಾನ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್ ಪಂದ್ಯದ ವೇಳೆ ವಿಶ್ವ ದಾಖಲೆಯನ್ನು ನಿರ್ಮಿಸಿರುವ ರಾಜಸ್ಥಾನ ರಾಯಲ್ಸ್ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ.
15ರ ಹರೆಯದ ಸೂರ್ಯವಂಶಿ, 20ನೇ ವಯಸ್ಸಿಗೆ ಕಾಲಿಡುವ ಮೊದಲು ಟಿ-20 ಕ್ರಿಕೆಟ್ ನಲ್ಲಿ 100 ಸಿಕ್ಸರ್ ಗಳನ್ನು ಸಿಡಿಸಿದ ಯುವ ಕ್ರಿಕೆಟಿಗ ಎಂಬ ಕೀರ್ತಿಗೆ ಭಾಜನರಾಗಿ ಇತಿಹಾಸ ನಿರ್ಮಿಸಿದರು.
ಸೂರ್ಯವಂಶಿ ಎಸೆತಗಳ ಆಧಾರದಲ್ಲಿ ವೇಗವಾಗಿ ಈ ಸಾಧನೆ ಮಾಡಿ ಮತ್ತೊಂದು ದಾಖಲೆಯನ್ನೂ ಮುರಿದರು. ಕೇವಲ 514 ಎಸೆತಗಳಲ್ಲಿ ಈ ಗುರಿ ತಲುಪಿದ ಸೂರ್ಯವಂಶಿ, ಕಿರೊನ್ ಪೊಲಾರ್ಡ್ (843 ಎಸೆತ) ದಾಖಲೆಯನ್ನು ಮುರಿದರು.
ಮುಹಮ್ಮದ್ ಸಿರಾಜ್ ಬೌಲಿಂಗ್ನಲ್ಲಿ ತಾನು ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದರು. ಕೇವಲ 16 ಎಸೆತಗಳಲ್ಲಿ ತಲಾ ಮೂರು ಬೌಂಡರಿ ಹಾಗೂ ಸಿಕ್ಸರ್ಗಳ ಸಹಿತ 36 ರನ್ ಗಳಿಸಿ ಸಿರಾಜ್ ಗೆ ವಿಕೆಟ್ ಒಪ್ಪಿಸಿದರು.
Next Story




