ಸೂಪರ್ ಓವರ್ ನಲ್ಲಿ ಸೋತ ನಂತರ ಲಂಕಾ ಆಟಗಾರರೊಂದಿಗೆ ವೈಭವ್ ಸೂರ್ಯವಂಶಿ ವಾಗ್ವಾದ!

Photo Credit : NDTV
ಡಾಂಬುಲ್ಲಾ, ಜೂ. 15: ಸೋಮವಾರ ನಡೆದ ತ್ರಿಕೋನ ಏಕದಿನ ಸರಣಿಯ ನಾಲ್ಕನೇ ಪಂದ್ಯದ ಫಲಿತಾಂಶವು ಸೂಪರ್ ಓವರ್ನಲ್ಲಿ ನಿರ್ಧಾರವಾದ ನಂತರ ಭಾರತ ‘ಎ’ ತಂಡದ ಬ್ಯಾಟರ್ ವೈಭವ್ ಸೂರ್ಯವಂಶಿ ಶ್ರೀಲಂಕಾ ‘ಎ’ ತಂಡದ ಕೆಲವು ಆಟಗಾರರೊಂದಿಗೆ ವಾಗ್ವಾದ ನಡೆಸಿದ್ದಾರೆ. ತನ್ನ ತಾಳ್ಮೆ ಕಳೆದುಕೊಂಡ 15ರ ಬಾಲಕ ಸೂರ್ಯವಂಶಿ ಲಂಕಾದ ಓರ್ವ ಆಟಗಾರನನ್ನು ತಳ್ಳಿದ್ದಾರೆ.
ಸೂಪರ್ ಓವರ್ ಅಂತ್ಯಗೊಂಡ ನಂತರ ಈ ಘಟನೆ ನಡೆದಿದೆ. ಗೆಲ್ಲಲು 19 ರನ್ ಗುರಿ ಪಡೆದಿದ್ದ ಭಾರತ ‘ಎ’ ತಂಡಕ್ಕೆ ಕೊನೆಯ ಎಸೆತದಲ್ಲಿ 8 ರನ್ ಅಗತ್ಯವಿತ್ತು. ಶ್ರೀಲಂಕಾ ‘ಎ’ ತಂಡದ ವೇಗಿ ಕುಗಾಥಾಸ್ ಮಥುಲನ್ ಯಾರ್ಕರ್ ಎಸೆದರು. ವೈಭವ್ ರನ್ ಗಳಿಸಲು ವಿಫಲವಾಗಿದ್ದು, ಲಂಕಾ ತಂಡ ಜಯ ಸಾಧಿಸಿತು.
ಶ್ರೀಲಂಕಾ ‘ಎ’ ತಂಡದ ಆಟಗಾರರು ಸಂಭ್ರಮಾಚರಣೆಯಲ್ಲಿ ತೊಡಗಿದಾಗ ಬೇಸರಗೊಂಡಂತೆ ಕಂಡುಬಂದ ಸೂರ್ಯವಂಶಿ ಓರ್ವ ಫೀಲ್ಡರ್ನೊಂದಿಗೆ ವಾಗ್ವಾದ ನಡೆಸಿ ಓರ್ವ ಆಟಗಾರನನ್ನು ತಳ್ಳಿದರು. ಆಗ ಭಾರತ ‘ಎ’ ತಂಡದ ಇನ್ನೋರ್ವ ಆಟಗಾರ ಸೂರ್ಯಾಂಶ್ ಶೆಡ್ಗೆ ಇಬ್ಬರನ್ನು ಬೇರ್ಪಡಿಸಿದರು. ಆದರೆ ಯುವ ಆಟಗಾರ ಸೂರ್ಯವಂಶಿಯ ಸಿಟ್ಟು ತಣಿಯಲಿಲ್ಲ. ಏನೋ ಗೊಣಗುತ್ತಾ ಪೆವಿಲಿಯನ್ನತ್ತ ಸಾಗಿದರು.
ಇದಕ್ಕೂ ಉಭಯ ತಂಡಗಳು ನಿಗದಿತ 50 ಓವರ್ ಗಳಲ್ಲಿ 265 ರನ್ ಗಳಿಸಿದ ಕಾರಣ ಪಂದ್ಯವು ಟೈನಲ್ಲಿ ಕೊನೆಗೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ‘ಎ’ ತಂಡವು 49.2 ಓವರ್ಗಳಲ್ಲಿ 265 ರನ್ ಗಳಿಸಿ ಆಲೌಟಾಯಿತು. ಸೂರ್ಯಾಂಶ್ (72 ರನ್, 66 ಎಸೆತ) ಸರ್ವಾಧಿಕ ಸ್ಕೋರ್ ಗಳಿಸಿದರು. ವಿಪ್ರಜ್ ನಿಗಮ್ ಕೆಳ ಸರದಿಯಲ್ಲಿ 49 ಎಸೆತಗಳಲ್ಲಿ 51 ರನ್ ಕೊಡುಗೆ ನೀಡಿದರು.
ಶ್ರೀಲಂಕಾ ತಂಡವು ಸದೀರ ಸಮರವಿಕ್ರಮ (93 ರನ್, 113 ಎಸೆತ) ನೆರವಿನಿಂದ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 265 ರನ್ ಗಳಿಸಿತು. ಆಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಅಳವಡಿಸಲಾಯಿತು.
ಸೂಪರ್ ಓವರ್ ನಲ್ಲಿ ಶ್ರೀಲಂಕಾ ‘ಎ’ ತಂಡವು 16 ರನ್ ಗಳಿಸಿತು. 17 ರನ್ ಗುರಿ ಪಡೆದ ಭಾರತ ‘ಎ’ ತಂಡವು ಕೇವಲ 9 ರನ್ ಗಳಿಸಿತು. ಈ ಗೆಲುವಿನ ಮೂಲಕ ಲಂಕಾ ತಂಡವು ಎರಡು ಅಂಕ ಗಳಿಸಿತು.
ಇದೇ ಸರಣಿಯಲ್ಲಿ ಶ್ರೀಲಂಕಾ ವಿರುದ್ಧದ ಮಳೆಬಾಧಿತ ಪಂದ್ಯದಲ್ಲಿ ಭಾರತ ತಂಡವು ಸೋಲುಂಡಿತ್ತು.
सुपर ओवर में बल्ला नहीं चला, तो गुस्सा चल पड़ा!
— ziya khan (@TonkZiya) June 15, 2026
हार के बाद वैभव सूर्यवंशी की श्रीलंकाई खिलाड़ियों से भिड़ंत, मामला हाथापाई तक पहुंचने की नौबत में।
क्रिकेट में जज़्बा जरूरी है, लेकिन जज़्बात अगर हावी हो जाएं तो सुर्खियां खेल से ज्यादा विवाद बटोर लेती हैं।#VaibhavSuryavanshi… pic.twitter.com/WrKTPs7mjL






