ಟ್ವೆಂಟಿ-20 ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳಿಸಿದ ಸುಝಿ ಬೇಟ್ಸ್
ವಿರಾಟ್ ಕೊಹ್ಲಿ ದಾಖಲೆ ಮುರಿದ ನ್ಯೂಝಿಲ್ಯಾಂಡಿನ ಮಹಿಳಾ ಬ್ಯಾಟರ್

ಸುಝಿ ಬೇಟ್ಸ್ - Photo Source: Photosport | ವಿರಾಟ್ ಕೊಹ್ಲಿ - Photo Source: twitter
ವೆಲ್ಲಿಂಗ್ಟನ್: ಟ್ವೆಂಟಿ-20 ಕ್ರಿಕೆಟ್ನಲ್ಲಿ ಗರಿಷ್ಠ ರನ್ ಕಲೆ ಹಾಕಿ ಇತಿಹಾಸವನ್ನು ರಚಿಸಿರುವ ನ್ಯೂಝಿಲ್ಯಾಂಡಿನ ಪ್ರಮುಖ ಕ್ರಿಕೆಟ್ ಆಟಗಾರ್ತಿ ಸುಝಿ ಬೇಟ್ಸ್ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.
ಬೇಟ್ಸ್ ಇದೀಗ 149 ಟಿ-20 ಪಂದ್ಯಗಳಲ್ಲಿ 4,021 ರನ್ ಗಳಿಸಿದ್ದು, ಇದರಲ್ಲಿ 26 ಅರ್ಧಶತಕ ಹಾಗೂ 1 ಶತಕವಿದೆ. ಟಿ-20 ವಿಶ್ವಕಪ್ನಲ್ಲಿ ಕೊನೆಯ ಬಾರಿ ಟಿ-20 ಪಂದ್ಯವನ್ನಾಡಿರುವ ಕೊಹ್ಲಿ 115 ಪಂದ್ಯಗಳಲ್ಲಿ 52.73ರ ಸರಾಸರಿಯಲ್ಲಿ 37 ಅರ್ಧ ಶತಕ ಹಾಗೂ 1 ಶತಕಗಳ ಸಹಿತ ಒಟ್ಟು 4,008 ರನ್ ಗಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 45 ರನ್ ಗಳಿಸಿದ ಬೇಟ್ಸ್ ಅವರು ಕೊಹ್ಲಿ ಅವರ ದಾಖಲೆಯನ್ನು ಮುರಿದರು. ದಕ್ಷಿಣ ಆಫ್ರಿಕಾ 11 ರನ್ನಿಂದ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಬೇಟ್ಸ್ ಅವರ 1 ಸಿಕ್ಸರ್ ಹಾಗೂ 5 ಬೌಂಡರಿ ಒಳಗೊಂಡಿರುವ ಇನಿಂಗ್ಸ್ ವ್ಯರ್ಥವಾಗಿದೆ.
ಆಸ್ಟ್ರೇಲಿಯದ ನಾಯಕಿ ಮೆಗ್ ಲ್ಯಾನಿಂಗ್(132 ಟಿ-20, 3,405 ರನ್)ಗರಿಷ್ಠ ರನ್ ಗಳಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.





