ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ | 31 ಎಸೆತದಲ್ಲಿ ಶತಕ ಸಿಡಿಸಿದ ಉರ್ವಿಲ್ ಪಟೇಲ್

ಉರ್ವಿಲ್ ಪಟೇಲ್ | Photo Credit : ANI
ಹೈದರಾಬಾದ್, ನ. 26: ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ ಪಂದ್ಯಾವಳಿಯ ಆರಂಭಿಕ ದಿನವಾದ ಬುಧವಾರ ಸರ್ವಿಸಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗುಜರಾತ್ ತಂಡದ ನಾಯಕ ಉರ್ವಿಲ್ ಪಟೇಲ್ 31 ಎಸೆತಗಳಲ್ಲಿ ಶತಕ ಸಿಡಿಸಿದರು.
ಹೈದರಾಬಾದ್ ನ ಜಿಂಖಾನಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅವರು 11 ಬೌಂಡರಿಗಳು ಮತ್ತು ಎಂಟು ಸಿಕ್ಸರ್ ಗಳನ್ನು ಸಿಡಿಸಿದರು. ಪಂದ್ಯವನ್ನು ಗುಜರಾತ್ ಇನ್ನೂ 45 ಎಸೆತಗಳು ಬಾಕಿಯಿರುವಂತೆಯೇ ಎಂಟು ವಿಕೆಟ್ ಗಳಿಂದ ಜಯಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಸರ್ವಿಸಸ್ ಒಂಭತ್ತು ವಿಕೆಟ್ ಗಳ ನಷ್ಟಕ್ಕೆ 182 ರನ್ ಗಳನ್ನು ಗಳಿಸಿತು.
ಅದಕ್ಕೆ ಉತ್ತರವಾಗಿ, ಗುಜರಾತ್ ತಂಡದ ಆರಂಭಿಕರಾದ ಉರ್ವಿಲ್ ಮತ್ತು ಆರ್ಯ ದೇಸಾಯಿ ಸರ್ವಿಸಸ್ ತಂಡದ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. ಅವರು ಮೊದಲ ವಿಕೆಟ್ ಗೆ 174 ರನ್ ಗಳ ಬೃಹತ್ ಭಾಗೀದಾರಿಕೆಯನ್ನು ನಿಭಾಯಿಸಿದರು. ಉರ್ವಿಲ್ 37 ಎಸೆತಗಳಲ್ಲಿ 119 ರನ್ ಗಳಿಸಿ ಅಜೇಯವಾಗಿ ಉಳಿದರು. ಅವರು ತನ್ನ ಇನಿಂಗ್ಸ್ ನಲ್ಲಿ 12 ಬೌಂಡರಿಗಳು ಮತ್ತು 10 ಸಿಕ್ಸರ್ ಗಳನ್ನು ಬಾರಿಸಿದರು.
ಐಪಿಎಲ್ನ ಕಳೆದ ಋತುವಿನಲ್ಲಿ ಉರ್ವಿಲ್ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು. ಐಪಿಎಲ್ ತಂಡವು ಅವರನ್ನು ಈ ಬಾರಿ ಮಿನಿ ಹರಾಜಿಗೆ ಮುನ್ನ ತನ್ನಲ್ಲೇ ಉಳಿಸಿಕೊಂಡಿದೆ.







