ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ | ಹರ್ಯಾಣವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಜಾರ್ಖಂಡ್

ಇಶಾನ್ ಕಿಶನ್ | Photo Credit : X/BCCI
ಪುಣೆ: ನಾಯಕ ಇಶಾನ್ ಕಿಶನ್ 49 ಬಾಲ್ ಗಳಲ್ಲಿ ಗಳಿಸಿದ ಸ್ಫೋಟಕ ಶತಕ(101)ದ ನೆರವಿನಿಂದ, ಗುರುವಾರ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನ ಟಿ-20 ಫೈನಲ್ ಪಂದ್ಯದಲ್ಲಿ ಹರ್ಯಾಣ ತಂಡದ ವಿರುದ್ಧ 69 ರನ್ ಗಳ ಭರ್ಜರಿ ಗಳಿಸುವ ಮೂಲಕ ಜಾರ್ಖಂಡ್ ತಂಡ ಚೊಚ್ಚಲ ಬಾರಿಗೆ ದೇಶೀಯ ಟಿ-20 ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಾಯಕ ಇಶಾನ್ ಕಿಶನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಜಾರ್ಖಂಡ್ ತಂಡ ಮೂರು ವಿಕೆಟ್ ನಷ್ಟಕ್ಕೆ 263 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಹರ್ಯಾಣ ತಂಡ ಕೇವಲ 193 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ, ಜಾರ್ಖಂಡ್ ತಂಡ 69 ರನ್ ಗಳ ಬೃಹತ್ ಅಂತರದ ಗೆಲುವಿನೊಂದಿಗೆ ಚೊಚ್ಚಲ ಬಾರಿಗೆ ದೇಶೀಯ ಟಿ-20 ಚಾಂಪಿಯನ್ ಟ್ರೋಫಿಗೆ ಮುತ್ತಿಟ್ಟಿತು.
ಇಶಾನ್ ಕಿಶನ್ ಈ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ, ಭಾರತ ತಂಡದ ಮತ್ತೊಬ್ಬ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮರೊಂದಿಗೆ ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ದಾಖಲೆಯೊಂದನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಈ ಇಬ್ಬರು ಆಟಗಾರರು ಸೈಯದ್ ಮುಷ್ತಾಕ್ ಅಲಿ ಟೂರ್ನಮೆಂಟ್ ನಲ್ಲಿ ತಲಾ ಐದು ಶತಕಗಳನ್ನು ಗಳಿಸಿದ್ದಾರೆ.
ಟೂರ್ನಮೆಂಟ್ ಉದ್ದಕ್ಕೂ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ ಅನುಕುಲ್ ರಾಯ್, ಸರಣಿ ಶ್ರೇಷ್ಠರಾಗಿ ಹೊರ ಹೊಮ್ಮಿದರು. ಅವರು ಒಟ್ಟು 303 ರನ್ ಹಾಗೂ 18 ವಿಕೆಟ್ ಗಳನ್ನು ಈ ಟೂರ್ನಮೆಂಟ್ ನಲ್ಲಿ ತಮ್ಮ ಬುಟ್ಟಿಗೆ ಹಾಕಿಕೊಂಡರು.







