ಟಿ-20 ಕ್ರಿಕೆಟ್ | ವಿಂಡೀಸ್ ದಿಗ್ಗಜ ಗೇಲ್ ದಾಖಲೆ ಮುರಿದ ಅಭಿಷೇಕ್ ಶರ್ಮಾ

ಅಭಿಷೇಕ್ ಶರ್ಮಾ | Photo Credit : PTI
ವೆಲ್ಲಿಂಗ್ಟನ್: ಟಿ-20 ಕ್ರಿಕೆಟ್ನಲ್ಲಿ ದಾಖಲೆಯ ಪ್ರದರ್ಶನ ಮುಂದುವರಿಸಿದ ಅಭಿಷೇಕ್ ಶರ್ಮಾ ವೆಸ್ಟ್ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ದಾಖಲೆಯೊಂದನ್ನು ಮುರಿದರು. ಪುರುಷರ ಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಇನಿಂಗ್ಸ್ವೊಂದರಲ್ಲಿ ಮೂರನೇ ಬಾರಿ 10ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದ್ದಾರೆ.
ಭಾರತದ ಓಪನರ್ ಅಭಿಷೇಕ್ ಕೇವಲ 38 ಎಸೆತಗಳಲ್ಲಿ 113 ರನ್ ಗಳಿಸುವ ಹಾದಿಯಲ್ಲಿ 11 ಸಿಕ್ಸರ್ ಹಾಗೂ 9 ಬೌಂಡರಿ ಗಳಿಸಿದರು. ಮೂರು ಟಿ-20 ಇನಿಂಗ್ಸ್ಗಳಲ್ಲಿ ಕನಿಷ್ಠ 10 ಸಿಕ್ಸರ್ಗಳನ್ನು ಗಳಿಸಿರುವ ಅಭಿಷೇಕ್ ಅವರು ಗೇಲ್ ದಾಖಲೆ ಹಿಂದಿಕ್ಕಿದರು. ಗೇಲ್ ಎರಡು ಬಾರಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯದ ಕರಣ್ಬೀರ್ ಸಿಂಗ್ ಇನಿಂಗ್ಸ್ವೊಂದರಲ್ಲಿ ಐದು ಬಾರಿ ಈ ಸಾಧನೆಗೈದು ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಪುರುಷರ ಟಿ-20 ಇನಿಂಗ್ಸ್ನಲ್ಲಿ ಅತಿ ಹೆಚ್ಚು ಬಾರಿ 10ಕ್ಕಿಂತ ಹೆಚ್ಚು ಸಿಕ್ಸರ್ ಸಿಡಿಸಿದವರು
5-ಕರಣ್ಬೀರ್ ಸಿಂಗ್(ಆಸ್ಟ್ರೀಯ)
3-ಅಭಿಷೇಕ್ ಶರ್ಮಾ(ಭಾರತ)
2-ಕ್ರಿಸ್ ಗೇಲ್(ವೆಸ್ಟ್ಇಂಡೀಸ್)
2-ಆ್ಯರೊನ್ ಫಿಂಚ್(ಆಸ್ಟ್ರೇಲಿಯ)
2-ಏಡ್ರಿಯನ್ ಡನ್ಬಾರ್(ಸರ್ಬಿಯ)
2. ಕೆಂಡೆಲ್ ಕಡೊವಾಕಿ-ಫ್ಲೆಮಿಂಗ್(ಜಪಾನ್)




