ಟಿ-20 ಕ್ರಿಕೆಟ್: 100 ವಿಕೆಟ್ ಪೂರೈಸಿದ ಇಂಗ್ಲೆಂಡ್ನ ಮೊದಲ ಬೌಲರ್ ಆದಿಲ್ ರಶೀದ್

ಆದಿಲ್ ರಶೀದ್ | Photo: NDTV
ಹೊಸದಿಲ್ಲಿ: ಸ್ಪಿನ್ನರ್ ಆದಿಲ್ ರಶೀದ್ ಟಿ-20 ಮಾದರಿಯ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ಇಂಗ್ಲೆಂಡ್ನ ಮೊತ್ತ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.
ಬ್ರಿಡ್ಜ್ಟೌನ್ನಲ್ಲಿ ವೆಸ್ಟ್ಇಂಡೀಸ್ ವಿರುದ್ಧ ಮಂಗಳವಾರ ನಡೆದ ಮೊದಲ ಟಿ-20 ಪಂದ್ಯದಲ್ಲಿ ರಶೀದ್ ಈ ಮಹತ್ವದ ಸಾಧನೆ ಮಾಡಿದರು.
ಈ ಪಂದ್ಯದಲ್ಲಿ 35ರ ಹರೆಯದ ಸ್ಪಿನ್ನರ್ ರಶೀದ್ 25 ರನ್ಗೆ 2 ವಿಕೆಟ್ ಪಡೆದದ್ದರು. ತಾನಾಡಿದ 100ನೇ ಟಿ20 ಪಂದ್ಯದಲ್ಲಿ ರಶೀದ್ 25.99ರ ಸರಾಸರಿಯಲ್ಲಿ 100 ವಿಕೆಟ್ ಗಳಿಸಿದ್ದು, 2 ರನ್ಗೆ 4 ವಿಕೆಟ್ ಶ್ರೇಷ್ಠ ಬೌಲಿಂಗ್ ಆಗಿದೆ. ವೇಗದ ಬೌಲರ್ ಕ್ರಿಸ್ ಜೋರ್ಡನ್ 88 ಪಂದ್ಯಗಳಲ್ಲಿ 96 ವಿಕೆಟ್ಗಳನ್ನು ಪಡೆದು ರಶೀದ್ಗೆ ಪೈಪೋಟಿ ನೀಡುತ್ತಿದ್ದಾರೆ.
ಮೊಯಿನ್ ಅಲಿ ಅವರನ್ನು ಹಿಂದಿಕ್ಕಿರುವ ರಶೀದ್ ಇದೀಗ ಇಂಗ್ಲೆಂಡ್ನ 2ನೇ ಯಶಸ್ವಿ ಸ್ಪಿನ್ ಬೌಲರ್ ಆಗಿದ್ದಾರೆ.
ರಶೀದ್ ಇದೀಗ 254 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 359 ವಿಕೆಟ್ಗಳನ್ನು ಪಡೆದಿದ್ದಾರೆ. 5/27 ಶ್ರೇಷ್ಠ ಬೌಲಿಂಗ್. ಮೊಯಿನ್ ಅಲಿ 284 ಪಂದ್ಯಗಳಲ್ಲಿ 358 ವಿಕೆಟ್ಗಳನ್ನು ಪಡೆದಿದ್ದಾರೆ. ಗ್ರೇಮ್ ಸ್ವಾನ್(410 ವಿಕೆಟ್, 178 ಪಂದ್ಯಗಳು) ಇಂಗ್ಲೆಂಡ್ನ ಶ್ರೇಷ್ಠ ಸ್ಪಿನ್ನರ್ ಆಗಿದ್ದಾರೆ.
ವೇಗದ ಬೌಲರ್ ಜೇಮ್ಸ್ ಆ್ಯಂಡರ್ಸನ್ ಇಂಗ್ಲೆಂಡ್ ಪರ ಗರಿಷ್ಠ ವಿಕೆಟ್ ಪಡೆದಿದ್ದಾರೆ. ಅವರು 396 ಅಂತರ್ರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 977 ವಿಕೆಟ್ಗಳನ್ನು ಪಡೆದಿದ್ದಾರೆ.







