ಐದನೇ, ಅಂತಿಮ 20 ಪಂದ್ಯ | ವಿಶ್ವಕಪ್ ಗೂ ಮುನ್ನ ಭಾರತ–ಕಿವೀಸ್ ಗೆ ಕೊನೆಯ ಅವಕಾಶ

Photo Credit : PTI
ತಿರುವನಂತಪುರ, ಜ.30: ಮುಂದಿನ ತಿಂಗಳು ನಡೆಯಲಿರುವ ಟಿ–20 ವಿಶ್ವಕಪ್ ಟೂರ್ನಿಗೆ ಮುನ್ನ ಭಾರತ ಹಾಗೂ ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡಗಳು ಶನಿವಾರ ಕೊನೆಯ ಟಿ–20 ಪಂದ್ಯವನ್ನು ಆಡಲಿವೆ.
ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು ಹರ್ಷಿತ್ ರಾಣಾರನ್ನು ಏಳನೇ ಕ್ರಮಾಂಕದಲ್ಲಿ ಆಡಿಸಿ, ವರುಣ್ ಚಕ್ರವರ್ತಿಗೆ ವಿಶ್ರಾಂತಿ ನೀಡುವ ಮೂಲಕ ಪ್ರಯೋಗ ನಡೆಸಿತ್ತು.
ಗಾಯದ ಸಮಸ್ಯೆ ಎದುರಿಸುತ್ತಿರುವ ನ್ಯೂಝಿಲ್ಯಾಂಡ್ ತಂಡವು ಯಾವುದೇ ಪ್ರಯೋಗಕ್ಕೆ ಮುಂದಾಗಿಲ್ಲ. ಬಿಬಿಎಲ್ನಲ್ಲಿ ಒಟ್ಟು 466 ರನ್ ಗಳಿಸಿರುವ ಫಿನ್ ಅಲ್ಲೆನ್ ಕಿವೀಸ್ ಪಾಳಯವನ್ನು ಸೇರಿದ್ದಾರೆ. ಫಿನ್ ಭಾರತದಲ್ಲಿ ಕೇವಲ ಮೂರು ಟಿ–20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ.
ಭಾರತ ತಂಡವು ಸಂಜು ಸ್ಯಾಮ್ಸನ್ನಿಂದ ಉತ್ತಮ ರನ್ಗಳ ನಿರೀಕ್ಷೆಯಲ್ಲಿದೆ. ಸ್ಯಾಮ್ಸನ್ಗೆ ತನ್ನ ತವರು ಮೈದಾನದಲ್ಲಿ ಮಿಂಚುವ ಅಪೂರ್ವ ಅವಕಾಶ ಲಭಿಸಿದೆ.
ಕಳೆದ ನಾಲ್ಕು ಪಂದ್ಯಗಳಲ್ಲಿ ಕಿವೀಸ್ ಇನಿಂಗ್ಸ್ ಆರಂಭಿಸಿದ್ದ ಡೆವೊನ್ ಕಾನ್ವೆ ಅವರು ಅಲ್ಲೆನ್ಗೆ ಅವಕಾಶ ಮಾಡಿಕೊಡಬಹುದು. ವಿಶ್ವಕಪ್ ಗೂ ಮುನ್ನ ಜೇಮ್ಸ್ ನೀಶಾಮ್ ಆಡುವ ಅವಕಾಶ ಪಡೆಯಲಿದ್ದಾರೆಯೇ? ಎಂಬ ಕುತೂಹಲ ಎಲ್ಲರಲ್ಲಿದೆ.
ಕಳೆದ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದ ಆಡದ ಇಶಾನ್ ಕಿಶನ್ ಅವರು ಇನಿಂಗ್ಸ್ ಆರಂಭಿಸಬಹುದು. ಅಭಿಷೇಕ್ ಶರ್ಮಾ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ.
►ಪಿಚ್ ಹಾಗೂ ವಾತಾವರಣ
ತಿರುವನಂತಪುರದಲ್ಲಿ ದಿನಪೂರ್ತಿ ಉಷ್ಣಾಂಶ ಒಂದೇ ರೀತಿಯಾಗಿರಲಿದೆ. 2023 ಹಾಗೂ 2022ರಲ್ಲಿ ಇಲ್ಲಿ ಎರಡು ಟಿ–20 ಪಂದ್ಯಗಳನ್ನು ಆಡಲಾಗಿತ್ತು. ಎರಡೂ ಬಾರಿ ಭಾರತ ತಂಡವು ಜಯಶಾಲಿಯಾಗಿತ್ತು. 2023ರಲ್ಲಿ ಆಸ್ಟ್ರೇಲಿಯಾ ಹಾಗೂ 2022ರಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿತ್ತು.
►ಅಂಕಿ–ಅಂಶಗಳು
• ನ್ಯೂಝಿಲ್ಯಾಂಡ್ನ ಅತ್ಯಂತ ಯಶಸ್ವಿ ಟಿ–20 ಬೌಲರ್ ಆಗಿ ಹೊರಹೊಮ್ಮಲು ಇಶ್ ಸೋಧಿಗೆ ಕೇವಲ ಎರಡು ವಿಕೆಟ್ಗಳ ಅಗತ್ಯವಿದೆ. ಟಿಮ್ ಸೌಥಿ ಒಟ್ಟು 164 ವಿಕೆಟ್ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದಾರೆ.
• ಟಿ–20 ಕ್ರಿಕೆಟ್ನಲ್ಲಿ 2,000 ರನ್ ಪೂರೈಸಲು ಟಿಮ್ ಸೀಫರ್ಟ್ಗೆ 52 ರನ್ ಅಗತ್ಯವಿದೆ.
• ಟಿ–20 ಕ್ರಿಕೆಟ್ನಲ್ಲಿ 3,000 ರನ್ ಗಳಿಸಿದ ವಿಶ್ವದ 12ನೇ ಆಟಗಾರ ಎನಿಸಿಕೊಳ್ಳಲು ಸೂರ್ಯಕುಮಾರ ಯಾದವ್ಗೆ 33 ರನ್ ಅಗತ್ಯವಿದೆ.
►ತಂಡಗಳು
ಭಾರತ (ಸಂಭಾವ್ಯ):
1. ಅಭಿಷೇಕ್ ಶರ್ಮಾ
2. ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್)
3. ಇಶಾನ್ ಕಿಶನ್ / ಶ್ರೇಯಸ್ ಅಯ್ಯರ್
4. ಸೂರ್ಯಕುಮಾರ ಯಾದವ್ (ನಾಯಕ)
5. ಹಾರ್ದಿಕ್ ಪಾಂಡ್ಯ
6. ರಿಂಕು ಸಿಂಗ್
7. ಶಿವಂ ದುಬೆ
8. ಹರ್ಷಿತ್ ರಾಣಾ / ಅಕ್ಷರ್ ಪಟೇಲ್
9. ಅರ್ಷದೀಪ್ ಸಿಂಗ್
10. ಜಸ್ಪ್ರಿತ್ ಬುಮ್ರಾ
11. ವರುಣ್ ಚಕ್ರವರ್ತಿ / ಕುಲದೀಪ್ ಯಾದವ್
►ನ್ಯೂಝಿಲ್ಯಾಂಡ್ (ಸಂಭಾವ್ಯ):
1. ಫಿನ್ ಅಲ್ಲೆನ್
2. ಡೆವೊನ್ ಕಾನ್ವೆ (ವಿಕೆಟ್ಕೀಪರ್)
3. ರಚಿನ್ ರವೀಂದ್ರ
4. ಡ್ಯಾರಿಲ್ ಮಿಚೆಲ್
5. ಗ್ಲೆನ್ ಫಿಲಿಪ್ಸ್
6. ಮಾರ್ಕ್ ಚಾಪ್ಮನ್
7. ಮಿಚೆಲ್ ಸ್ಯಾಂಟ್ನರ್ (ನಾಯಕ)
8. ಝ್ಯಾಕ್ ಫೌಲ್ಕ್ಸ್ / ಜೇಮ್ಸ್ ನೀಶಾಮ್
9. ಮೈಕಲ್ ಬ್ರೇಸ್ವೆಲ್ / ಇಶ್ ಸೋಧಿ
10. ಕೈಲ್ ಜೇಮೀಸನ್ / ಮ್ಯಾಟ್ ಹೆನ್ರಿ
11. ಜೇಕಬ್ ಡಫಿ
►ಪಂದ್ಯ ಆರಂಭದ ಸಮಯ: ರಾತ್ರಿ 7:00







