ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ | ಯುಎಇ ಕ್ರಿಕೆಟ್ ತಂಡದ ನಾಯಕನಾಗಿ ಮುಹಮ್ಮದ್ ವಸೀಂ ನೇಮಕ

ಮುಹಮ್ಮದ್ ವಸೀಂ | PC : X
ದುಬೈ: ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರನ್ನು ಒಳಗೊಂಡ ಯುಎಇ ಕ್ರಿಕೆಟ್ ತಂಡದ ನಾಯಕರಾಗಿ ಆರಂಭಿಕ ಬ್ಯಾಟರ್ ಮುಹಮ್ಮದ್ ವಸೀಂ ನೇಮಕಗೊಂಡಿದ್ದಾರೆ.
ಟಿ20 ಸರಣಿಯ ಪಂದ್ಯಗಳು ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಶನಿವಾರ(ಮೇ 17)ಹಾಗೂ ಸೋಮವಾರ(ಮೇ 19)ನಡೆಯಲಿದೆ.
ಇದಕ್ಕೂ ಮೊದಲು ವಿಕೆಟ್ಕೀಪರ್-ಬ್ಯಾಟರ್ ಲಿಟನ್ ದಾಸ್ರನ್ನು ಯುಎಇ ಹಾಗೂ ಪಾಕಿಸ್ತಾನ ತಂಡದ ವಿರುದ್ಧದ ಸರಣಿಗೆ ಬಾಂಗ್ಲಾದೇಶ ತಂಡದ ನಾಯಕರನ್ನಾಗಿ ನೇಮಿಸಲಾಗಿದೆ. ದಾಸ್ ಅವರು ನಜ್ಮುಲ್ ಹುಸೇನ್ ಶಾಂಟೊ ಬದಲಿಗೆ ಆಡಲಿದ್ದಾರೆ. ಶಾಂಟೊ ಅವರು ಈ ವರ್ಷಾರಂಭದಲ್ಲಿ ಟಿ20 ನಾಯಕತ್ವ ತ್ಯಜಿಸಿದ್ದರು. ಆಫ್ ಸ್ಪಿನ್ನರ್ ಮೆಹದಿ ಹಸನ್ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಯುಎಇ ಹಾಗೂ ಪಾಕಿಸ್ತಾನ ವಿರುದ್ಧದ ಸರಣಿಗೆ ಬಾಂಗ್ಲಾದೇಶದ 16 ಸದಸ್ಯರ ತಂಡಕ್ಕೆ ತೌಹಿದ್ ಹ್ರಿದೊಯ್, ತನ್ವೀರ್ ಇಸ್ಲಾಮ್, ಮುಸ್ತಫಿಝುರ್ರ ಹ್ಮಾನ್ ಹಾಗೂ ಶರೀಫುಲ್ ಇಸ್ಲಾಮ್ ವಾಪಸಾಗಿದ್ದಾರೆ.
Next Story





