T20 ವಿಶ್ವಕಪ್ ನಲ್ಲಿ ಗರಿಷ್ಠ ರನ್: ಮಿಥಾಲಿ ರಾಜ್ ದಾಖಲೆ ಮುರಿದ ಹರ್ಮನ್ಪ್ರೀತ್

ಹರ್ಮನ್ಪ್ರೀತ್ ಕೌರ್ | Photo Credit : PTI
ಬರ್ಮಿಂಗ್ಹ್ಯಾಮ್, ಜೂ.15: ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ತಮ್ಮ ವೃತ್ತಿಜೀವನದ ಮತ್ತೊಂದು ಮಹತ್ವದ ಮೈಲಿಗಲ್ಲು ತಲುಪಿದ್ದಾರೆ. ಮಹಿಳೆಯರ T20ವಿಶ್ವಕಪ್ ಇತಿಹಾಸದಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೌರ್ ಈ ಸಾಧನೆ ಮಾಡಿದರು.
ಮಾಜಿ ನಾಯಕಿ ಮಿಥಾಲಿ ರಾಜ್ ನಿರ್ಮಿಸಿದ್ದ 726 ರನ್ ಗಳ ದಾಖಲೆಯನ್ನು ಮುರಿಯಲು ಕೌರ್ಗೆ ಕೇವಲ ಒಂದು ರನ್ ಅಗತ್ಯವಿತ್ತು. ತಾನು ಎದುರಿಸಿದ ಮೊದಲ ಎಸೆತದಲ್ಲೇ ಅವರು ಆ ದಾಖಲೆಯನ್ನು ಹಿಂದಿಕ್ಕಿದರು.
ಭಾರತ 18 ರನ್ ಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್ಗೆ ಬಂದ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಅವರೊಂದಿಗೆ ಮೂರನೇ ವಿಕೆಟ್ ಗೆ 91 ರನ್ ಗಳ ಅಮೂಲ್ಯ ಜೊತೆಯಾಟ ನಿರ್ಮಿಸಿದರು.
ಮಂಧಾನ 68 ರನ್ ಗಳಿಸಿದರೆ, ಕೌರ್ 35 ಎಸೆತಗಳಲ್ಲಿ 36 ರನ್ ಬಾರಿಸಿ ತಂಡದ ಇನಿಂಗ್ಸ್ ಗೆ ಬಲ ತುಂಬಿದರು.
Next Story




