ತೈಪೆ ಓಪನ್: ಕ್ವಾರ್ಟರ್ ಫೈನಲ್ ನಲ್ಲಿ ಎಡವಿದ ಪ್ರಣಯ್

ಎಚ್.ಎಸ್. ಪ್ರಣಯ್ |Photo: twitter @KhelNow
ತೈಪೆ: ತೈಪೆ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಮೆಂಟ್ನಲ್ಲಿ ಶುಕ್ರವಾರ ಭಾರತದ ಆಟಗಾರ ಎಚ್.ಎಸ್. ಪ್ರಣಯ್ ಹಾಂಕಾಂಗ್ನ ಕಾ ಲಾಂಗ್ ಅಂಗುಸ್ ವಿರುದ್ಧ ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ.
ಶುಕ್ರವಾರ ಏಕಪಕ್ಷೀಯವಾಗಿ ಸಾಗಿದ ಪುರುಷರ ಸಿಂಗಲ್ಸ್ನ ಕ್ವಾರ್ಟರ್ ಫೈನಲ್ ಸ್ಪರ್ಧೆಯಲ್ಲಿ ವಿಶ್ವದ ನಂ.9ನೇ ಆಟಗಾರ ಪ್ರಣಯ್ ತನ್ನ ಲಯ ಕಂಡುಕೊಳ್ಳುವಲ್ಲಿ ವಿಫಲರಾಗಿ ಐದನೇ ಶ್ರೇಯಾಂಕದ ಕಾ ಲಾಂಗ್ ವಿರುದ್ಧ 19-21, 8-21 ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ. 6-5 ಹೆಡ್-ಟು-ಹೆಡ್ ದಾಖಲೆ ಯೊಂದಿಗೆ ಈ ಪಂದ್ಯಕ್ಕೆ ಆಗಮಿಸಿದ ಮೂರನೇ ಶ್ರೇಯಾಂಕದ ಪ್ರಣಯ್ ಆರಂಭದಲ್ಲಿ ತನ್ನ ಎದುರಾಳಿಯೊಂದಿಗೆ ಸಮಬಲದ ಹೋರಾಟ ನೀಡಿದರು. ಆದರೆ, ಪಂದ್ಯ ಮುಂದುವರಿದಂತೆ ಲಯ ಕಳೆದುಕೊಂಡರು. ಮೊದಲ ಗೇಮ್ನ ಮೊದಲ ಭಾಗದಲ್ಲಿ ಉಭಯ ಆಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿದೆ.
ಪ್ರಣಯ್ ಸೋಲಿನೊಂದಿಗೆ ತೈಪೆ ಓಪನ್ ನಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.
Next Story