ಪಾಕಿಸ್ತಾನ ಆಟಗಾರರ ಕೈಲುಕದ ಟೀಮ್ ಇಂಡಿಯಾ: ಐಸಿಸಿ ನಿಯಮ ಏನು ಹೇಳುತ್ತದೆ?

PC | x.com/BCCI
ಹೊಸದಿಲ್ಲಿ, ಸೆ.15: ದುಬೈನಲ್ಲಿ ನಡೆದ ಏಶ್ಯ ಕಪ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ 7 ವಿಕೆಟ್ಗಳ ಅಂತರದಿಂದ ಜಯಶಾಲಿಯಾಗಿದ್ದು, ಪಂದ್ಯ ನಂತರದ ದೃಶ್ಯವು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಆಟಗಾರರು ಪಾಕಿಸ್ತಾನಿ ಆಟಗಾರರ ಕೈ ಕುಲುಕದೆ ನೇರವಾಗಿ ಡ್ರೆಸ್ಸಿಂಗ್ ರೂಮ್ಗೆ ತೆರಳಿದರು. ಈ ಮೂಲಕ ದೀರ್ಘಕಾಲದಿಂದ ಕ್ರಿಕೆಟ್ನಲ್ಲಿ ನಡೆದುಕೊಂಡ ಬಂದಿರುವ ಸಂಪ್ರದಾಯವನ್ನು ಮುರಿಯಲಾಯಿತು. ಈ ಹೆಜ್ಜೆಯಿಂದಾಗಿ ಭಾರತವು ದಂಡನೆಗೆ ಒಳಗಾಗುವುದೇ ಎಂಬ ಪ್ರಶ್ನೆ ಎದುರಾಗಿದೆ.
ಐಸಿಸಿಯ ನಿಯಮಗಳ ಪ್ರಕಾರ, ‘‘ವಿರೋಧಿ ತಂಡದ ಯಶಸ್ಸಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಸ್ವಂತ ತಂಡದ ಯಶಸ್ಸಿಗೆ ಖುಷಿ ಪಡಬೇಕು. ಫಲಿತಾಂಶ ಏನೇ ಇರಲಿ, ಪಂದ್ಯದ ಕೊನೆಯಲ್ಲಿ ಅಧಿಕಾರಿಗಳು ಹಾಗೂ ಎದುರಾಳಿ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಬೇಕು’’
ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.1.1ರ ಪ್ರಕಾರ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾದ ನಡವಳಿಕೆಯನ್ನು ಲೆವೆಲ್-1ರ ಅನ್ವಯ ಅಪರಾಧವಾಗುತ್ತದೆ.
ಎದುರಾಳಿ ತಂಡದ ಆಟಗಾರರ ಕೈಕುಲುಕದೆ ಇರುವುದು ತಾಂತ್ರಿಕವಾಗಿ ನಿಯಮ ಉಲ್ಲಂಘನೆ ಎಂದು ಪರಿಗಣಿಸಬಹುದು ಎಂದು ಕ್ರಿಕೆಟ್ ತಜ್ಞರು ಹೇಳಿದ್ದಾರೆ. ಅಂತಹ ಉಲ್ಲಂಘನೆಗಳಿಗೆ ಎಚ್ಚರಿಕೆ ನೀಡಲಾಗುವುದು ಅಥವಾ ಸಣ್ಣ ಮಟ್ಟದ ದಂಡ ವಿಧಿಸಲಾಗುತ್ತದೆ.







