ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ | ಆಯುಷ್ ಮ್ಹಾತ್ರೆ ಚೊಚ್ಚಲ ಶತಕ, ಮುಂಬೈಗೆ ಗೆಲುವು

ಆಯುಷ್ ಮ್ಹಾತ್ರೆ | Photo Credit : X
ಲಕ್ನೊ, ನ.28: ಆಯುಷ್ ಮ್ಹಾತ್ರೆ ಚೊಚ್ಚಲ ಶತಕದ(53 ಎಸೆತ, 110 ರನ್)ಸಹಾಯದಿಂದ ಮುಂಬೈ ತಂಡವು ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡವು ವಿದರ್ಭ ತಂಡದ ವಿರುದ್ದ 7 ವಿಕೆಟ್ ಗಳ ಅಂತರದಿಂದ ಜಯಶಾಲಿಯಾಗಿದೆ.
ಮುಂಬೈ ತಂಡವು ಶುಕ್ರವಾರ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು 193 ರನ್ ಗುರಿಯನ್ನು ಬೆನ್ನಟ್ಟಿತು.
ಏಶ್ಯಕಪ್ಗೆ ಭಾರತದ ಅಂಡರ್-19 ತಂಡದ ನಾಯಕನಾಗಿ ನೇಮಕಗೊಂಡಿರುವ ಮ್ಹಾತ್ರೆ ಟಿ-20 ಕ್ರಿಕೆಟ್ನಲ್ಲಿ ತನ್ನ ಮೊದಲ ಶತಕ ಗಳಿಸಿದರು. ಅವರ ಇನಿಂಗ್ಸ್ನಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್ ಗಳಿದ್ದವು. ಮ್ಹಾತ್ರೆ ಉತ್ತಮ ಆರಂಭ ಒದಗಿಸಿದರು. ಸೂರ್ಯಕುಮಾರ್(35 ರನ್,30 ಎಸೆತ)ಹಾಗೂ ಶಿವಂ ದುಬೆ(39 ರನ್, 19 ಎಸೆತ)ಗೆಲುವಿನ ವಿಧಿವಿಧಾನ ಪೂರೈಸಿದರು.
ಆಯುಷ್ ಪ್ರಥಮ ದರ್ಜೆ, ಲಿಸ್ಟ್ ಹಾಗೂ ಟಿ20ಯಲ್ಲಿ ಶತಕ ಗಳಿಸಿದ ಯುವ ಆಟಗಾರ(18 ವರ್ಷ, 135 ದಿನಗಳು)ಎನಿಸಿಕೊಂಡಿದ್ದಾರೆ. ವೈಭವ ಸೂರ್ಯವಂಶಿ ಹಾಗೂ ವಿಜಯ್ ರೆಲ್ ನಂತರ ಟಿ-20ಯಲ್ಲಿ ಶತಕಗಳಿಸಿದ ಮೂರನೇ ಯುವ ಆಟಗಾರ ಎನಿಸಿಕೊಂಡಿದ್ದಾರೆ.
ಶಿವಂ ದುಬೆ ( 31 ರನ್ಗೆ 3)ಹಾಗೂ ಸಾಯಿರಾಜ್ ಪಾಟೀಲ್(3-33) ತಲಾ ಮೂರು ವಿಕೆಟ್ ಗಳನ್ನು ಪಡೆದು ವಿದರ್ಭ ತಂಡವನ್ನು 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 192 ರನ್ಗೆ ನಿಯಂತ್ರಿಸುವಲ್ಲ ನೆರವಾದರು. ವಿದರ್ಭ ಪರವಾಗಿ ಆರಂಭಿಕ ಆಟಗಾರರಾದ ಅಥರ್ವ(64 ರನ್)ಹಾಗೂ ಅಮನ್ ಮರ್ಕಂಡೆ(61 ರನ್)ಅರ್ಧಶತಕ ಗಳಿಸಿದರು.







